Foundry ಉದ್ಯಮ ಮತ್ತಷ್ಟು ವಿಸ್ತರಣೆಗೆ ಪ್ರಯತ್ನ: ಡಿ.ಎಸ್.ಚಂದ್ರಶೇಖರ್ ಹೇಳಿಕೆ

10 smg 3
ಐಐಎ-ï ರಾಷ್ಟಿçÃಯ ಅಧ್ಯಕ್ಷರಾಗಿ ಡಿ.ಎಸ್.ಚಂದ್ರಶೇಖರ್ ಅಽಕಾರ ಸ್ವೀಕರಿಸಿದರು. ವಿನಿತ್ ಜೈನ್, ದಿನೇಶ್ ಗುಪ್ತಾ, ಎಸ್.ಕುಪ್ಪಸ್ವಾಮಿ, ದೇವೇಂದ್ರ ಜೈನ್, ಡಾ. ಅಭಿಷಿಕ್ತ ಚೌಧರಿ ಇದ್ದರು.
Published on

ಶಿವಮೊಗ್ಗ: ದೇಶದಲ್ಲಿ -Ëಂಡ್ರಿ ಉದ್ಯಮವನ್ನು ಮತ್ತಷ್ಟು ವಿಸ್ತರಿಸುವ ದೃಷ್ಟಿಯಿಂದ ಜವಾಬ್ದಾರಿಯುತ ಪ್ರಯತ್ನ ನಡೆಸಲಾಗುವುದು. ಮುಂಬರುವ ದಿನಗಳಲ್ಲಿ ಅತ್ಯುತ್ತಮ ನಿರ್ಧಾರಗಳ ಮೂಲಕ -Ëಂಡ್ರಿ ಉದ್ಯಮಕ್ಕೆ ಹೆಚ್ಚಿನ ಸೇವೆ ಒದಗಿಸಲಾಗುವುದು ಎಂದು ಐಐಎ-ï(Institute Of Indian Foundryman) ರಾಷ್ಟಿçÃಯ ಅಧ್ಯಕ್ಷ ಡಿ.ಎಸ್.ಚಂದ್ರಶೇಖರ್ ಹೇಳಿದರು.

ನಗರದಲ್ಲಿ ಭಾನುವಾರ ಐಐಎ-ï ಸರ್ವಸದಸ್ಯರ ಸಭೆಯಲ್ಲಿ ಐಐಎ-ï ರಾಷ್ಟಿçÃಯ ಅಧ್ಯಕ್ಷರಾಗಿ ಅಽಕಾರ ಸ್ವೀಕರಿಸಿ ಮಾತನಾಡಿ, -Ëಂಡ್ರಿ ಉದ್ಯಮ ದೇಶಾದ್ಯಂತ ಬಲಿಷ್ಠವಾಗಿ ಬೆಳೆಯುವಲ್ಲಿ ಐಐಎ-ï ಸಂಸ್ಥೆಯ ಹಿಂದಿನ ಎಲ್ಲ ಅಧ್ಯಕ್ಷರು, ಸದಸ್ಯರ ಅಪಾರ ಶ್ರಮ ಇದೆ. ಪ್ರತಿ ವರ್ಷ ಮೆಗಾ ಕಾರ್ಯಕ್ರಮಗಳ ಮೂಲಕ -Ëಂಡ್ರಿ ಉದ್ಯಮ ಪ್ರೋತ್ಸಾಹಿಸುವ ಕೆಲಸ ನಡೆಯುತ್ತಿದೆ ಎಂದರು.
ಐಐಎ-ï ಸದಸ್ಯರ ಸಂಖ್ಯೆ 5 ಸಾವಿರ ಗುರಿ ತಲುಪಿಸುವ ಉದ್ದೇಶವಿದೆ. ದಕ್ಷಿಣ ಸೇರಿ ಎಲ್ಲ ವಲಯಗಳಲ್ಲೂ ಉತ್ತಮ ಪ್ರಯತ್ನ ನಡೆಯುತ್ತಿದೆ. ಬರುವ ವರ್ಷಗಳಲ್ಲಿ ಸದಸ್ಯರ ಸಂಖ್ಯೆ 5 ಸಾವಿರ ದಾಟುವ ಭರವಸೆಯಿದೆ. ಸಂಸ್ಥೆಗೆ ಎಲ್ಲ ಸದಸ್ಯರ ಸಹಕಾರ ಮುಖ್ಯ ಎಂದು ಹೇಳಿದರು.
ವಿ ಕಾಸ್ಟ್ ಥೀಮ್ ಆಶಯದೊಂದಿಗೆ ಐಐಎ-ï ಕಾರ್ಯನಿರ್ವಹಿಸಲಿದ್ದು ಹೊಸ ತಂತ್ರಜ್ಞಾನದ ಸಂಪೂರ್ಣ ಬಳಕೆ ಮಾಡಿಕೊಳ್ಳಲಾಗುವುದು. ದೇಶಾದ್ಯಂತ ಎಲ್ಲ -Ëಂಡ್ರಿ ಉದ್ಯಮಿಗಳಿಗೆ ಹಾಗೂ ಹೊಸದಾಗಿ ಉದ್ಯಮ ಆರಂಭಿಸುವವರಿಗೆ ಸೂಕ್ತ ಮಾರ್ಗದರ್ಶನ, ವಿಶೇಷ ತರಬೇತಿ ಉಪನ್ಯಾಸಗಳು, ಮೆಗಾ ಕಾರ್ಯಕ್ರಮಗಳ ಮೂಲಕ ಉದ್ಯಮಕ್ಕೆ ಶಕ್ತಿ ತುಂಬಲಾಗುತ್ತದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಮಾತನಾಡಿ, ಶಿವಮೊಗ್ಗದ ಡಿ.ಎಸ್.ಚಂದ್ರಶೇಖರ್ ಅವರು ಐಐಎ-ï ಸಂಸ್ಥೆಯ ರಾಷ್ಟಿçÃಯ ಅಧ್ಯಕ್ಷರಾಗಿ ಅಽಕಾರ ಸ್ವೀಕರಿಸಿರುವುದು ಅತ್ಯಂತ ಸಂತೋಷದ ಸಂಗತಿ. ಅಧ್ಯಕ್ಷ ಸ್ಥಾನವನ್ನು ಸಮರ್ಥವಾಗಿ ನಿರ್ವಹಿಸಲಿದ್ದಾರೆ ಎಂದರು.
ಬೆAಗಳೂರಿನಲ್ಲಿ 2024ರ -ೆ.2, 3 ಮತ್ತು 4ರಂದು 79ನೇ ಇಂಡಿಯನ್ -Ëಂಡ್ರಿಮನ್ ಕಾಂಗ್ರೆಸ್ ಮತ್ತು ಅಂತಾರಾಷ್ಟಿçÃಯ -Ëಂಡ್ರಿ ವಸ್ತುಗಳ ಪ್ರದರ್ಶನ ಆಯೋಜಿಸಲಾಗಿದೆ. ದೇಶಾದ್ಯಂತ ಇರುವ ಎಲ್ಲ -Ëಂಡ್ರಿ ಉದ್ಯಮಿಗಳು ಪಾಲ್ಗೊಳ್ಳಬೇಕು. ಈ ಕಾರ್ಯಕ್ರಮದಲ್ಲಿ ವಿದೇಶದ -Ëಂಡ್ರಿ ಉದ್ಯಮದ ಪ್ರತಿನಿಽಗಳೂ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಐಐಎ-ï ಸರ್ವ ಸದಸ್ಯರ ಸಭೆಯಲ್ಲಿ ಕೊಯಮತ್ತೂರಿನ ಎಸ್.ಮುತ್ತುಕುಮಾರ್ ಗೌರವ ಕಾರ್ಯದರ್ಶಿಯಾಗಿ, ನಾಗಪುರದ ಸುಶೀಲ್ ಶರ್ಮಾ ಖಜಾಂಚಿಯಾಗಿ ಅಽಕಾರ ಸ್ವೀಕರಿಸಿದರು. ಉದ್ಯಮಿಗಳಾದ ಡಿ.ಜಿ.ಬೆನಕಪ್ಪ, ಪಿಯರ್‌ಲೈಟ್ ಲೈರ‍್ಸ್ನ ಅಂಕಿತ್ ಎಸ್. ದಿವೇಕರ್, ಶ್ರೇಯೋನಿಽ ಎಂಟರ್‌ಪ್ರೆÊಸಸ್‌ನ ಜಿ.ವಿ.ಕಿರಣ್‌ಕುಮಾರ್ ಐಐಎ-ï 2023-25ನೇ ಸಾಲಿನ ರಾಷ್ಟಿçÃಯ ಕೌನ್ಸಿಲ್‌ಗೆ ಚುನಾಯಿತರಾದರು.
ದೇಶದ ೧೫ ರಾಜ್ಯಗಳ ನೂರಾರು -Ëಂಡ್ರಿ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಐಐಎ-ï ನಿಕಟಪೂರ್ವ ರಾಷ್ಟಿçÃಯ ಅಧ್ಯಕ್ಷ ವಿನಿತ್ ಜೈನ್, ನಿಕಟಪೂರ್ವ ಕಾರ್ಯದರ್ಶಿ ದಿನೇಶ್ ಗುಪ್ತಾ, ನಿಕಟಪೂರ್ವ ಖಜಾಂಚಿ ಎಸ್.ಕುಪ್ಪಸ್ವಾಮಿ, ಐಐಎ-ï ಮಾಜಿ ಅಧ್ಯಕ್ಷ ದೇವೇಂದ್ರ ಜೈನ್, ಡಾ. ಅಭಿಷಿಕ್ತ ಚೌಧರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net