

ಗುಳೇದಗುಡ್ಡ : ತಾಲೂಕು ಕಚೇರಿ ಆವರಣದಲ್ಲಿ ಕಳೆದ 14 ದಿನಗಳಿಂದ ಗ್ರಾಮ ಆಡಳಿತಾಧಿಕಾರಿಗಳು ಹಮ್ಮಿಕೊಂಡಿದ್ದ ಮುಷ್ಕರ ಹಿಂಪಡೆಯಲಾಗಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಎಂ.ಎಸ್. ಗುಡಿಸಾಗರ ತಿಳಿಸಿದ್ದಾರೆ.
ಮುಷ್ಕರ ಹಿಂಪಡೆಯುವುದರ ಬಗ್ಗೆ ತಾಲೂಕು ದಂಡಾಧಿಕಾರಿ ಮಂಗಳಾ ಎಂ. ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ ಅವರ ಸೂಚನೆ ಮೇರೆಗೆ ಮುಷ್ಕರ ಹಿಂಪಡೆಯಲಾಗಿದ್ದು, ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದೇವೆ ಎಂದರು.
ಉಪಾಧ್ಯಕ್ಷ ಎಚ್.ಡಿ. ಭಗವತಿ, ಪಿ.ಪಿ. ತಳವಾರ, ವಿಜಯ ರೋಣದ, ಪ್ರಶಾಂತ ಹೊನ್ನಳ್ಳಿ, ಎ.ಎಚ್. ಮುಲ್ಲಾ. ಎಂ.ಬಿ. ಮುಜಾವರ, ಎಸ್.ಜಿ. ಸರೂರ, ಅನುಷಾ ಪಾಟೀಲ, ಭಾಗ್ಯಾ ಹುನಕುಂಟಿ ಮತ್ತಿತರರಿದ್ದರು.