ಕಾಂಗ್ರೆಸ್​ ಸರ್ಕಾರದ ಗ್ಯಾರಂಟಿ ಸಮಾಪ್ತಿ

End of guarantee of Congress government
ವಿಜಯಪುರ ಹೊರವಲಯದ ತೊರವಿ ಗ್ರಾಮದ ಸಿದ್ಧಾರ್ಥ ನಗರದ ಗಣಪತಿ ಗುಡಿ ಬಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೂಮಿಪೂಜೆ ನೆರವೇರಿಸಿದರು.
Published on

ವಿಜಯಪುರ: ಬಾಯ್ತೆರೆದರೆ ಗ್ಯಾರಂಟಿ, ಗ್ಯಾರಂಟಿ ಎಂದು ಹೇಳುವ ಕಾಂಗ್ರೆಸ್​ ಸರ್ಕಾರದ ಗ್ಯಾರಂಟಿಯೇ ಈಗ ಮುಗಿದಿದೆ. ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದ್ದು, ಅಭಿವೃದ್ಧಿ ಕಾರ್ಯಗಳೆಲ್ಲ ಸ್ಥಗಿತಗೊಂಡಿವೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರಾಜ್ಯ ಸರ್ಕಾರದ ವಿರುದ್ಧ ಛಾಟಿ ಬೀಸಿದರು.

ನಗರ ಹೊರವಲಯದ ತೊರವಿ ಗ್ರಾಮದ ಸಿದ್ಧಾರ್ಥ ನಗರದ ಗಣಪತಿ ಗುಡಿ ಬಳಿ ಭಾನುವಾರ 2022&23 ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 5 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಲನಿಯ ಆಂತರಿಕ ರಸ್ತೆಗಳ ಸುಧಾರಣೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ದಿನಕ್ಕೆ ಎರಡ್ಮೂರು ಕೋಟಿ ಮೊತ್ತದ ಕಾಮಗಾರಿಗಳ ಭೂಮಿಪೂಜೆ ನಡೆಯುತ್ತಿತ್ತು. ಆದರೆ, ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದು ವರ್ಷದ ಮೇಲೆ 5 ಕೋಟಿ ರೂ. ಭೂಮಿಪೂಜೆ ನಡೆಯುತ್ತಿದೆ.

ನನಗೆ ಅನುದಾನ ತರುವುದು ಗೊತ್ತಿದೆ. ಈಗಾಗಲೇ ೇತ್ರದಲ್ಲಿ ಸಾಕಷ್ಟು ಕೆಲಸಗಳು ಆಗಿದ್ದು, ಬಾಕಿ ಉಳಿದ ಅಲ್ಪ&ಸ್ವಲ್ಪ ಕೆಲಸಗಳನ್ನು ತ್ವರಿತವಾಗಿ ಮುಗಿಸುವೆ ಎಂದು ಭರವಸೆ ನೀಡಿದರು.

ನಮ್ಮ ವಿಜಯಪುರ ನಗರ ಮೊದಲು ಧೂಳಾಪುರ ಎಂಬ ಹಣೆಪಟ್ಟಿ ಹೊತ್ತಿತ್ತು. ಅದರಿಂದ ಜನರಲ್ಲಿ ಅಸ್ತಮಾ ಕಾಯಿಲೆ ಹೇರಳವಾಗಿತ್ತು. ದಿನಕ್ಕೆ ಕನಿಷ್ಠ ಎರಡ್ಮೂರು ಬಾರಿ ಬಟ್ಟೆ ಬದಲಿಸಬೇಕಿತ್ತು. ಆದರೆ, ಈಗ ನಗರದ ಎಲ್ಲ ರಸ್ತೆಗಳ ಅಭಿವೃದ್ಧಿಯಾಗಿದ್ದು, ವಾತಾವರಣ ಸಂಪೂರ್ಣ ಬದಲಾಗಿದೆ ಎಂದರು.

ಬಿಜೆಪಿ ನಗರ ಮಂಡಲ ಉಪಾಧ್ಯಕ್ಷ ಸಂತೋಷ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ದಾದಾಸಾಹೇಬ ಬಾಗಾಯತ, ನಾಗೇಂದ್ರ ಯಾದವ, ಬಸವರಾಜ ಕುಂಬಾರ, ಡಿ.ಎಂ. ೂರ್ಪಣೆ, ಡಿ.ಕೆ. ಸರಸಂಬಿ, ಪರಸಪ್ಪ ಕಬಾಡೆ, ಶಿವರಾಜ ಓತಿಹಾಳ, ಪಿಡಿಒ ರಾಜೇಶ್ವರಿ ತುಂಗಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net