ಉಪವಾಸ ವ್ರತ ಅಂತ್ಯ

End of fasting
ಜಮಖಂಡಿ ನಗರದ ಮುಧೋಳ ರಸ್ತೆಯ ಹೊರವಲಯದ ಆರ್ಶೆ ಮಸಜಿದ್ ಮೋಮಿನ್ ಮೊಹಲ್ಲಾ ಸುನ್ನಿ ಮಡ್ಡಿ ಈದ್ಗಾ ಮೈದಾನದಲ್ಲಿ ಮೌಲಾನಾ ನೂರ ಜಮಾಲ್ ನೇತೃತ್ವದಲ್ಲಿ ಸಾವಿರಾರು ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
Published on

ಜಮಖಂಡಿ: ನಗರದಲ್ಲಿ ರಂಜಾನ್ ಮಾಸಾಂತ್ಯದ ದಿನ ಈದ್-ಉಲ್-ಫಿತರ್‌ನ್ನು ಸೋಮವಾರ ಮುಸ್ಲಿಮರು ಸಡಗರದಿಂದ ಆಚರಿಸಿದರು.

ನಗರದ ಮುಧೋಳ ರಸ್ತೆಯ ಹೊರವಲಯದ ರಾಜ್ಯ ಹೆದ್ದಾರಿ ಹತ್ತಿರದ ಆರ್ಶೆ ಮಸಜಿದ್ ಮೋಮಿನ್ ಮೊಹಲ್ಲಾ ಸುನ್ನಿ ಮಡ್ಡಿ ಈದ್ಗಾ, ಲಕ್ಕನ ಕೆರೆ ಹತ್ತಿರದ ಜಾಮಿಯಾ ಮಸಜಿದ್ ಈದ್ಗಾ, ದೇಸಾಯಿ ಸರ್ಕಲ್ ಹತ್ತಿರ ಜೋಗಿ ಮಡ್ಡಿ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಆರ್ಶೆ ಮಸಜಿದ್ ಮೋಮಿನ ಮೊಹಲ್ಲಾ ಸುನ್ನಿ ಮಡ್ಡಿ ಈದ್ಗಾ ಮೈದಾನದ ಪ್ರಾರ್ಥನೆಯಲ್ಲಿ ಮಾಜಿ ಶಾಸಕ ಆನಂದ ನ್ಯಾಮಗೌಡ ಪಾಲ್ಗೊಂಡು ಮಾತನಾಡಿದರು.

ಮೌಲಾನಾ ನೂರ ಜಮಾಲ್ ಹಾಗೂ ಆಯಾ ಈದ್ಗಾದ ಮೌಲಾನಾಗಳ ನೇತೃತ್ವದಲ್ಲಿ ನಗರದ ವಿವಿಧ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಜವಳಿ ನಿಗಮದ ಮಾಜಿ ಉಪಾಧ್ಯಕ್ಷ ನಜೀರ ಕಂಗನೊಳ್ಳಿ, ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ಹಾಜಿ ಇಲಾಹಿ ಕಂಗನೊಳ್ಳಿ, ರಫೀಕ ಬಾರಿಗಡ್ಡಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅನ್ವರ ಮೋಮಿನ, ದಿಲಾವರ ಶಿರೋಳ, ಅಬೂಬಕರ ಕುಡಚಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net