ಪ್ರಭಾವಿ ವ್ಯಕ್ತಿಯಿಂದ ಕೆರೆ ಏರಿ ಒತ್ತುವರಿ

13blrp1-jagadish
Published on
  • ಬೇಲೂರು: ತಾಲೂಕಿನ ಹೆಬ್ಬಾಳು ಗ್ರಾಮದ ಪ್ರಭಾವಿ ವ್ಯಕ್ತಿಯೊಬ್ಬರು ತಮ್ಮ ಜಮೀನಿಗೆ ಹೋಗುವುದಕ್ಕಾಗಿ ಕೆರೆ ಏರಿಯನ್ನು ಅಗೆದು ರಸ್ತೆ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಹೆಬ್ಬಾಳು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಜಗದೀಶ್ ಆರೋಪಿಸಿದರು.

  • ಗ್ರಾಮದ ಸಮೀಪ ಈರೇಕೆರೆ ಇದೆ. ಆದರೆ ನಮ್ಮ ಗ್ರಾಮದ ಪ್ರಭಾವಿಯೊಬ್ಬರು ತಮ್ಮ ಜಮೀನಿಗೆ ಹೋಗುವ ಉದ್ದೇಶದಿಂದ ಕೆರೆ ಏರಿ ರಸ್ತೆಯನ್ನು ಅಗೆದಿದ್ದಾರೆ. ಇದರಿಂದ ಈ ಕೆರೆ ಏರಿ ಮೇಲೆ ಓಡಾಡುವ ರೈತರು ಮತ್ತು ದನಕರುಗಳಿಗೆ ತೊಂದರೆಯಾಗುತ್ತಿದೆ. ಮಳೆಗಾಲದಲ್ಲಿ ಹೆಚ್ಚು ಮಳೆ ಬಂದು ಕೆರೆ ತುಂಬಿ ಒಡೆದು ಹೋದರೆ ಕೆರೆ ನೀರೆಲ್ಲ ನೂರಾರು ಎಕರೆ ಜಮೀನಿನ ಮೇಲೆ ಹರಿದು ಬೆಳೆ ನಾಶ ಹಾಗೂ ಮಣ್ಣು ಕೊರಕಲಾಗುತ್ತದೆ.
  • ಈ ವಿಚಾರವಾಗಿ ಶಾಸಕರು, ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ, ತಾಪಂ ಇಒ, ಜಿಪಂ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಸಂಬಂಧ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು. ಶೀಘ್ರವೇ ಸಮಸ್ಯೆ ಬಗೆಹರಿಸದಿದ್ದಲ್ಲಿ ಗ್ರಾಮಸ್ಥರ ಜತೆಗೂಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

  • ಹೆಬ್ಬಾಳು ಗ್ರಾಮದ ರೈತರಾದ ಪ್ರಕಾಶ್, ವೇದಮೂರ್ತಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net