ಕೋಮನೂರಿನಲ್ಲಿ ಒತ್ತುವರಿ ತೆರವು

28-11.MDL.02
Published on

ಮುದಗಲ್: ಬಯ್ಯಪುರ ಗ್ರಾಪಂ ವ್ಯಾಪ್ತಿಯ ಕೋಮನೂರಿನಲ್ಲಿ ಗಾಂವಠಾಣ ಜಾಗದಲ್ಲಿ ನಿರ್ಮಿಸಿದ್ದ ಅನಧಿಕೃತ ಕಟ್ಟಡಗಳನ್ನು ತಾಪಂನಿಂದ ಮಂಗಳವಾರ ತೆರವುಗೊಳಿಸಲಾಯಿತು.

ಪೊಲೀಸ್ ಬಂದೋಬಸ್ತ್‌ನಲ್ಲಿ ಜೆಸಿಬಿ ಮೂಲಕ ಅತಿಕ್ರಮಣ ಕಟ್ಟಡ ತೆರವಿಗೆ ಸಿಬ್ಬಂದಿ ಮುಂದಾಗಿದ್ದರು. ಈ ವೇಳೆ ಗ್ರಾಮಸ್ಥರು ಮತ್ತು ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆಯಿತು. ಪೊಲೀಸರು ವಾತಾವರಣ ತಿಳಿಗೊಳಿಸಿದರು. ನಾಗರಿಕರ ಸಂಚಾರಕ್ಕೆ ತಾತ್ಕಾಲಿಕ ರಸ್ತೆ ಇದ್ದು, ಮುಂದಿನ ದಿನಗಳಲ್ಲಿ ಸಿಸಿ ರಸ್ತೆ ನಿರ್ಮಿಸಲಾಗುವದು ಎಂದು ತಾಪಂ ಸಹಾಯಕ ನಿರ್ದೇಶಕ ಮಂಜುನಾಥ ಜಾವೂರು ತಿಳಿಸಿದರು. ಪಿಡಿಒ ಶಿವಕುಮಾರ ತುಂಬದ, ಸಿಬ್ಬಂದಿ ಯಮನೂರು,ಅಮರೇಶ, ಪಿಎಸ್‌ಐ ವೆಂಕಟೇಶ, ವೆಂಕಟಪ್ಪ ನಾಯಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net