

ಕಡೂರು: ತಾಲೂಕಿನ ಎಮ್ಮೆದೊಡ್ಡಿಯ ಸರ್ವೇ ನಂ.70 ರಲ್ಲಿರುವ 10 ಎಕರೆ ಅರಣ್ಯ ಪ್ರದೇಶದ ಅಕ್ರಮ ಒತ್ತುವರಿಯನ್ನು ಶನಿವಾರ ಪೊಲೀಸರ ಸಹಕಾರದೊಂದಿಗೆ ಅರಣ್ಯಾಧಿಕಾರಿಗಳು ತೆರವುಗೊಳಿಸಿದರು.
ಎಮ್ಮೆದೊಡ್ಡಿಯ ಸರ್ವೇ ನಂ.70ರಲ್ಲಿ 10 ಎಕರೆ ಅರಣ್ಯಜಾಗ ಅತಿಕ್ರಮಿಸಿ ಅದರಲ್ಲಿ ಮನೆ, ಕೋಳಿ ಶೆಡ್ ಮುಂತಾದವುಗಳನ್ನು ನಿರ್ಮಿಸಿ ಅಡಕೆ ಗಿಡಗಳನ್ನು ಬೆಳೆಸಲಾಗಿತ್ತು. ಈ ಜಾಗವನ್ನು ಕಡೂರು ಪುರಸಭೆ ನಿವೃತ್ತ ಮುಖ್ಯಾಧಿಕಾರಿಯೊಬ್ಬರೂ ಅತಿಕ್ರಮಿಸಿ ಅದರಲ್ಲಿ ಗೆಸ್ಟ್‌ಹೌಸ್, ಈಜುಕೊಳ ಮುಂತಾದವುಗಳನ್ನು ನಿರ್ಮಿಸಿದ್ದಾರೆ ಎಂದು ದೂರು ಸಲ್ಲಿಕೆಯಾಗಿತ್ತು. ಈ ಹಿನ್ನಲೆಯಲ್ಲಿ ಒಂದು ವರ್ಷದ ಹಿಂದೆ ಅಂದಿನ ಜಿಲ್ಲಾಧಿಕಾರಿಯಾಗಿದ್ದ ರಮೇಶ್‌ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ನಂತರ ತನಿಖೆ ಮಾಡಲು ತಹಸೀಲ್ದಾರ್‌ಗೆ ಸೂಚಿಸಿದ್ದರು.
ಈ ಬಗ್ಗೆ ಹಲವಾರು ತನಿಖೆಗಳು ನಡೆದು ನಂತರ ಅಂತಿಮವಾಗಿ ಎಸಿಎ್ ನ್ಯಾಯಾಲಯದ 60ಎ ಆದೇಶದನ್ವಯ ಈ ಭೂಮಿಯನ್ನು ತೆರವುಗೊಳಿಸಲು ಆದೇಶಿಸಲಾಗಿತ್ತು. ತೆರವಿಗೆ ಮುನ್ನ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಲು ಹಣಕಾಸು ನಿಗಮದ ಪ್ರಭಾರಿ ನಿರ್ದೇಶಕರಾಗಿರುವ ಎಚ್.ಎನ್.ಮಂಜುನಾಥ್, ಮುಸ್ಲಾಪುರದ ಪರಮೇಶ್ವರಪ್ಪ, ಜಾಹೀದಾ ಬಾನು, ಆಶಾ ರಮೇಶ್ ಎಂಬುವವರಿಗೆ ಸೂಚಿಸಲಾಗಿತ್ತು.
ಇದಕ್ಕೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ಶೆಡ್, ಮನೆ ಮುಂತಾದ ಕಟ್ಟಡಗಳನ್ನು ಶನಿವಾರ ಬೆಳಗ್ಗೆ ಎಸಿಎ್ ಮೋಹನ್‌ನಾಯ್ಕ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿದರು. ತೆರವು ಕಾರ್ಯಾಚರಣೆ ವೇಳೆ ಯಾರು ಇರಲಿಲ್ಲ. ಕಾರ್ಯಚರಣೆ ಆರಂಭದಲ್ಲಿ ಕೆಲವರು ಪ್ರತಿರೋಧ ವ್ಯಕ್ತಪಡಿಸಿದರೂ, ಅಧಿಕಾರಿಗಳು ಅದೇಶ ತೋರಿಸಿದಾಗ ಎಲ್ಲರೂ ಅಲ್ಲಿಂದ ತೆರಳಿದರು. ನಂತರ 10 ಎಕರೆ ಭೂಮಿಯನ್ನು ಅರಣ್ಯಇಲಾಖೆ ವಶಕ್ಕೆ ಪಡೆದು ಈ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ ಎಂಬ ಸೂಚನ ಫಲಕವನ್ನು ಅಳವಡಿಸಿದರು.
ಕಾರ್ಯಾಚರಣೆಯಲ್ಲಿ ವಲಯಾರಣ್ಯಾಧಿಕಾರಿ ರಜಾಕ್‌ಸಾಬ್ ನದ್ಾ, ಪಿಎಸ್‌ಐಗಳಾದ ಪವನ್, ನವೀನ್ ಕುಮಾರ್, ಎಮ್ಮೆದೊಡ್ಡಿ ವಲಯಾರಣ್ಯಾಧಿಕಾರಿ ಸಂತೋಷ್ ಹಾಗೂ ಸಿಬ್ಬಂದಿಗಳು ಇದ್ದರು.