

ಮೈಸೂರು: ಕೆ.ಬಿ.ಎಲ್. ಸಿದ್ಧಿ ವಿನಾಯಕ ಟ್ರಸ್ಟ್‌ನಿಂದ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರತಿಭಾ ಪುರಸ್ಕಾರ ಮತ್ತು ದಾನಿಗಳನ್ನು ಅಭಿನಂದಿಸಲಾಯಿತು.
ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಡಾ.ಈ.ಸಿ.ನಿಂಗರಾಜ್‌ಗೌಡ ಮಾತನಾಡಿ, ಪ್ರತಿಭಾ ಪುರಸ್ಕಾರದಿಂದಾಗಿ ವಿದ್ಯಾರ್ಥಿಗಳು ಮತ್ತಷ್ಟು ಸಾಧನೆ ಮಾಡಲು ಪ್ರೇರಣೆ ಸಿಗುತ್ತದೆ ಎಂದರು.
ಶೈಕ್ಷಣಿಕವಾಗಿ ಮಾತ್ರವಲ್ಲದೇ ಕ್ರೀಡಾ ಕ್ಷೇತ್ರ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೂ ಹಾಗೂ ಈ ಮಕ್ಕಳು ಸಾಧನೆ ಮಾಡಲೂ ನೆರವಾಗಿದ್ದ ಶಿಕ್ಷಕರು ಮತ್ತು ಪೋಷಕರಿಗೂ ಟ್ರಸ್ಟ್ ಪರವಾಗಿ ಧನ್ಯವಾದ ಸಲ್ಲಿಸಿದರು.
ಪ್ಯಾರೀಸ್‌ನಲ್ಲಿ ನಡೆಯುತ್ತೀರುವ ಪ್ಯಾರಒಲಿಂಪಿಕ್ಸ್‌ನಲ್ಲಿ 6 ಚಿನ್ನ ಸೇರಿದಂತೆ 26 ಪದಕಗಳನ್ನೂ ಪಡೆದು ಭಾರತಕ್ಕೆ ಕೀರ್ತಿ ತಂದಿರುವ ಎಲ್ಲ ಕ್ರೀಡಾಪಟುಗಳಿಗೂ ಅವರು ಕೃತಜ್ಞತೆ ಸಲ್ಲಿಸಿದರು.
ಎಲ್ಲ ವಿದ್ಯಾರ್ಥಿಗಳು ಶೈಕ್ಷಣಿಕ, ಕ್ರೀಡೆ, ವಿಜ್ಞಾನ ಮತ್ತು ತಂತ್ರಜ್ಞಾನ, ಬಾಹ್ಯಾಕಾಶ, ವೈದ್ಯಕೀಯ, ಯೋಗ, ಆದ್ಯಾತ್ಮೀಕ, ಸಾಂಸ್ಕೃತಿಕ, ಕೃಷಿ, ತೋಟಗಾರಿಕೆ ಹಾಗೂ ಇನ್ನಿತರ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿ ಭಾರತವೂ ಜಗತ್ತೀನಲ್ಲಿಯೇ ವಿಶ್ವಗುರು ಆಗಲೂ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಕೆ.ಬಿ.ಎಲ್. ಸಿದ್ಧಿ ವಿನಾಯಕ ಟ್ರಸ್ಟ್‌ನಿಂದ ವರ್ಷಪೂರ್ತಿ ಕಾರ್ಯಕ್ರಮಗಳನ್ನೂ ಮಾಡಿಕೊಂಡು ಬರುತ್ತೀದ್ದೇವೆ. ಮಕ್ಕಳಲ್ಲಿ ಮತ್ತು ಸಾರ್ವಜನಿಕರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸಿಲಿಕಾನ್ ಸಿಟಿ ಪಾರ್ಕ್ ಆವರಣದಲ್ಲಿರುವ 4 ಎಕರೆ ಜಾಗದಲ್ಲಿ ಸಾಲುಮರದ ತಿಮ್ಮಕ್ಕ ಅವರನ್ನೂ ಕರೆಸಿ, ಅವರ ಹೆಸರಿನಲ್ಲಿಯೇ ಹಲವಾರು ಗಿಡಗಳನ್ನು ನೆಟ್ಟು ಬೆಳೆಸುವುದರ ಮೂಲಕ ಉದ್ಯಾನವನವನ್ನು ನಿರ್ವಹಿಸುತ್ತೀದ್ದೇವೆ ಎಂದು ತಿಳಿಸಿದರು.
ಜತೆಗೆ ವಿಶೇಷ ಚೇತನರಿಗೆ ಅಗತ್ಯವಿರುವ ಕೃತಕ ಕಾಲು, ಗಾಲಿ ಖುರ್ಚಿಗಳನ್ನೂ ನೀಡಿದ್ದೇವೆ. ಮಹಿಳೆಯರು ಸ್ವಾವಲಂಬಿ ಆಗಬೇಕು ಎನ್ನುವ ಉದ್ದೇಶದಿಂದ ಉಚಿತವಾಗಿ ಹೊಲಿಗೆ ತರಬೇತಿ ಮತ್ತು ಹೊಲಿಗೆ ಯಂತ್ರಗಳನ್ನೂ ನೀಡಿದ್ದೇವೆ. ವಿನಾಯಕ ದೇವಸ್ಥಾನದ ಆವರಣದಲ್ಲಿ ವರ್ಷಪೂರ್ತಿ ಉಚಿತ ಯೋಗ, ಭಜನೆ, ಸತ್ಸಂಗ ತರಗತಿಗಳನ್ನೂ ಟ್ರಸ್ಟ್‌ನ ಅಧ್ಯಕ್ಷ ಎಲ್. ರವಿ ಸೇರಿದಂತೆ ಇನ್ನಿತರರ ಮಾರ್ಗದರ್ಶನದಲ್ಲಿ ನಡೆಸಿಕೊಂಡು ಬರುತ್ತೀದ್ದೇವೆ ಎಂದು ತಿಳಿಸಿದರು.
ಮೈಸೂರು, ಮಂಡ್ಯ ಜಿಲ್ಲೆಯಲ್ಲಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ಹಾಗೂ ಭರತನ್ಯಾಟ್ಯ, ಖೊಖೋ, ಕರಾಟೆ, ಯೋಗ, ಬಾಕ್ಸಿಂಗ್, ಕಬಡ್ಡಿ ಸೇರಿದಂತೆ ಇತರೇ ಕ್ರೀಡೆಗಳಲ್ಲಿ ಸಾಧನೆ ಮಾಡಿದ, ಭರತನಾಟ್ಯದಲ್ಲಿ ವಿಶೇಷ ಸಾಧನೆ ಮಾಡಿದ 18 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಅಲ್ಲದೇ ದೇವಸ್ಥಾನದ ನಿರ್ಮಾಣಕ್ಕೆ ಉದಾರವಾಗಿ ದೇಣಿಗೆ ನೀಡಿದ ಮುರುಗೇಶ್, ಗೋಪಾಲ್, ಸುದೀರ್ ದೇವರಾಜು, ಕಿರಣ್, ಸುರೇಶ್, ಮಹೇಶ್, ಶಿವಣ್ಣ ಇತರರನ್ನು ಗೌರವಿಸಲಾಯಿತು.
ಕೆ.ಬಿ.ಎಲ್ ಸಿಲಿಕಾನ್ ಸಿಟಿ ಓನರ್ಸ್ ವೆಲ್ ಫೇರ ಅಸೋಸಿಯನ್ ಅಧ್ಯಕ್ಷ ಕೆ.ಎನ್. ಸಂತೋಷ್, ಖಜಾಂಚಿ ಎಂ. ಮೋಹನ್, ವಿಜಯವಾಣಿ ಪತ್ರಿಕೆಯ ಸ್ಥಾನಿಕ ಸಂಪಾದಕ ಎಂ.ಆರ್. ಸತ್ಯನಾರಾಯಣ, ಮುಖಂಡರಾದ ಉಮಾಶಂಕರ್ ಆರಾಧ್ಯ, ಎನ್.ಕಿರಣ್, ಬಿ.ಎನ್. ಸುರೇಶ್, ಬಿ.ಬಿ.ಮಧುಕರ್, ನಿತೀನ್, ದೀಲಿಪ್ ಆರಾಧ್ಯ, ರವಿ, ರಾಜು, ವೆಂಕಟೇಶ್, ಪ್ರಶಾಂತ್, ಕೆ. ವಿವೇಕ್ ಗೌಡ, ವೈ.ಎಚ್. ಲೋಹಿತ್ ಕುಮಾರ್, ಡಿ.ಶ್ರೀಕಂಠೇಗೌಡ, ಎಚ್.ಡಿ.ರಮೇಶ್, ಸೂನಗಹಳ್ಳಿ ಮಹೇಶ್, ಪಿ.ಕೆ.ರಮೇಶ್, ಬೆಟ್ಟೇಗೌಡ, ಸುಭಾಷ್‌ಗೌಡ, ವಿಜಯ್ ಅರಸ್, ಅರ್ಚಕರಾದ ರತ್ನಾಕರ ಭಾರದ್ವಾಜ್, ಡಾ.ಮಜ್ಜಿಗೆಪುರ ಕೆ. ಶಿವರಾಮು, ಕಾರ್ತಿಕ್, ಶ್ರೀನಿವಾಸ್, ಡಾ.ಸ್ವಾಮಿ, ಈ.ಸಿ.ವಸಂತಕುಮಾರ್ ಇತರರು ಇದ್ದರು.