ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ

Untitled-3
ಹೊಸಕೋಟೆಯ ಮಾನವ ಸಾರಥಿ ಟ್ರಸ್ಟ್​ ಹಾಗೂ ರಾಷ್ಟ್ರೀಯ ಪ್ರಜಾಪ್ರಭುತ್ವ ಸೇನಾ ವತಿಯಿಂದ ಹಮ್ಮಿಕೊಂಡಿದ್ದ ನೋಟ್​ಪುಸ್ತಕ, ಲೇಖನಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಶಾಲೆ ಮುಖ್ಯಸ್ಥರು, ಶಿಕ್ಷಕರು, ಮಕ್ಕಳು ಹಾಗೂ ಮಾನವ ಸಾರಥಿ ನಿರ್ವಾಹಕಿ ಲಕ್ಷ್ಮೀ ಹೆಬ್ಬಾಳ್​ ಮತ್ತು ಲಕ್ಷ್ಮೀ ಹುಲ್ಕುಂಡ್​ ಇದ್ದರು.
Published on

ಹೊಸಕೋಟೆ : ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸೂಕ್ತ ಪೋತ್ಸಾಹ ನೀಡಲಾಗುತ್ತಿದೆ ಎಂದು ಎಂ.ವಿ.ಬಡಾವಣೆಯಲ್ಲಿರುವ ಮಾನವ ಸಾರಥಿ ಟ್ರಸ್ಟ್​ ಮುಖ್ಯಸ್ಥೆ ಶಾಂಭವಿ ಗೌಡ ಹೇಳಿದರು.

ಮಾನವ ಸಾರಥಿ ಟ್ರಸ್ಟ್​ ಹಾಗೂ ರಾಷ್ಟ್ರೀಯ ಪ್ರಜಾಪ್ರಭುತ್ವ ಸೇನಾ ವತಿಯಿಂದ ಹಮ್ಮಿಕೊಂಡಿದ್ದ ನೋಟ್​ಪುಸ್ತಕ, ಲೇಖನಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರೇರಣಾ ಯೋಜನೆಯಡಿ ತಾಲೂಕಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಎರಡು ಸಾವಿರ ಪುಸ್ತಕಗಳನ್ನು ವಿತರಿಸಲಾಗಿದೆ.

ನಾಲ್ಕು ವರ್ಷಗಳಿಂದ ಈ ಯೋಜನೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ. ಸರ್ಕಾರಿ ಶಾಲೆಯಲ್ಲಿ ಬಹಳಷ್ಟು ಬಡ ಮಕ್ಕಳೇ ಅಧಿಕವಾಗಿದ್ದು, ಅವರಿಗೆ ಪೂರಕ ಸೌಲಭ್ಯ ಕಲ್ಪಿಸಲು ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ಶಾಲೆಯಿಂದ ಹೊರಗುಳಿದ ಬಡ ಮಕ್ಕಳನ್ನು ಗುರುತಿಸಿ, ಪಾಳಕರ ಮನವೊಲಿಸಿ ಮಕ್ಕಳ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಸರ್ಕಾರಿ ಶಾಲೆಗಳಿಗೆ ದಾಖಲಿಸಲಾಗುತ್ತಿದೆ ಎಂದರು. ಶಾಲೆ ಮುಖ್ಯಸ್ಥರು, ಶಿಕ್ಷಕರು, ಮಕ್ಕಳು ಹಾಗೂ ಮಾನವ ಸಾರಥಿ ನಿರ್ವಾಹಕಿ ಲಕ್ಷ್ಮೀ ಹೆಬ್ಬಾಳ್​ ಮತ್ತು ಲಕ್ಷ್ಮೀ ಹುಲ್ಕುಂಡ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net