

ಹುಬ್ಬಳ್ಳಿ: ಕುಂದಗೋಳ ಮತಕ್ಷೇತ್ರದ ಛಬ್ಬಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಣ್ಣದರ್ಪಣೆ ಅಭಿಯಾನಕ್ಕೆ ಶಾಸಕ ಎಂ.ಆರ್. ಪಾಟೀಲ ಮಂಗಳವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ಗೋಡೆಗಳಿಗೆ ಹೊಸ ಕಳೆ ತುಂಬುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನೆರವು ಕಾರಣ. ಅವರ ಪರಿಕಲ್ಪನೆಯಲ್ಲಿ ರೂಪುಗೊಂಡ ಈ ಕಾರ್ಯಕ್ಕೆ ಕೈ ಜೋಡಿಸಲಾಗಿದೆ. ಮಕ್ಕಳ ಕಲಿಕೆಗೆ ಪ್ರೋತ್ಸಾಹ ತುಂಬಲಾಗುತ್ತಿದೆ ಎಂದರು.
ಗ್ರಾಪಂ ಅಧ್ಯಕ್ಷ ಹಮೀದ್ ಮುಲ್ಲಾ, ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷ ಎನ್.ಎಂ. ನಿಂಗನಗೌಡರ, ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ ನೇರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ, ಪ್ರಮುಖರಾದ ಮಹೇಶಗೌಡ ಪಾಟೀಲ, ನೇಮಚಂದ್ರ ಬಸಾಪುರ, ದೇವೇಂದ್ರಪ್ಪ ಕಖಾಗೆನವರ, ರುದ್ರಪ್ಪ ಅಗಡಿ, ಭಗವಂತ ಬಸಾಪುರ, ಸಹದೇವ ಮಾಳಗಿ, ಬಸವರಾಜ ವಡ್ಡರ, ಮಾಲತೇಶ ಶಾಗೋಟಿ ಇತರರು ಇದ್ದರು.