

ಮುದಗಲ್: ಜಯಂತಿ ಆಚರಣೆಗಳಿಂದ ಮಹಾನ್ ವ್ಯಕ್ತಿಗಳನ್ನು ನೆನೆಯುವುದರ ಜತೆಗೆ ಮಕ್ಕಳಿಗೆ ಉತ್ತಮ ಸಂಸ್ಕೃತಿ ಹಾಗೂ ವಿಚಾರಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಪಂಚಮಸಾಲಿ ಸಮುದಾಯದ ಟ್ರಸ್ಟ್ ಅಧ್ಯಕ್ಷ ಬಸವರಾಜ ಗಸ್ತಿ ಹೇಳಿದರು.
ಸಮೀಪದ ಬುದ್ದಿನ್ನಿ ಗ್ರಾಮದಲ್ಲಿ ಪಂಚಮಸಾಲಿ ಟ್ರಸ್ಟ್‌ನಿಂದ ಗುರುವಾರ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮ ಮಾತನಾಡಿದರು. ಕನ್ನಡ ನಾಡಿನ ಹೆಮ್ಮೆಯ ಮಹಿಳೆ ಬ್ರಿಟಿಷರಿಗೆ ನಡುಕ ಹುಟ್ಟಿಸಿದ ವೀರ ವನಿತೆ ಚನ್ನಮ್ಮನ ಆದರ್ಶಗಳನ್ನು ಅಳವಡಿಸಿಕೊಳ್ಳಿ ಎಂದರು.
ಪ್ರಮುಖರಾದ ಅಮರೇಶ್ ಚಿನ್ನಮಕ್ಕಳು, ಅಮರಪ್ಪ ಚಿನ್ನಮಕ್ಕಳು, ಬಸವರಾಜ ಗೊಂದಿ, ಶರಣಗೌಡ, ನಿಂಗರಾಜ ಗೊಂದಿ, ವೀರಭದ್ರಪ್ಪ ಚಿನ್ನಮಕ್ಕಳು ಇತರರಿದ್ದರು.