ಉತ್ತೇಜನ ಶಾಲೆಯ ಸೇವಾಕಾರ್ಯ ಶ್ಲಾಘನೀಯ

2
ಸಾಲಾಪುರ ಗ್ರಾಮದ ಉತ್ತೇಜನ ಪ್ರಾಥಮಿಕ ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮವನ್ನು ಅನಂತ ದೇಶಪಾಂಡೆ ಉದ್ಘಾಟಿಸಿದರು. ಡಾ.ಎ.ಎಸ್.ಲಾಲಸಂಗಿ, ಲಾಲಪ್ಪ ನಾಯಕ, ಅನಿಲ ಚಾಕಲಬ್ಬಿ ಇತರರಿದ್ದರು.
Published on

ರಾಮದುರ್ಗ: ಗುಣಮಟ್ಟದ ಶಿಕ್ಷಣದಿಂದ ಸಂಸ್ಥೆಗೆ ಹೆಸರು ಬರುತ್ತದೆ ಎಂದು ನರಗುಂದದ ಶ್ರೀ ಸಿದ್ಧೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಎ.ಎಸ್.ಲಾಲಸಂಗಿ ಹೇಳಿದರು.

ತಾಲೂಕಿನ ಸಾಲಾಪುರ ಗ್ರಾಮದ ಉತ್ತೇಜನ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಏರ್ಪಡಿಸಿದ್ದ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸುಧಾರಣೆಗಾಗಿ ಸಂಸ್ಥೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಮುಖ್ಯ ಅತಿಥಿ, ಚಲನಚಿತ್ರ ನಟ ಅನಂತ ದೇಶಪಾಂಡೆ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ಲಾಲಪ್ಪ ನಾಯಕ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಅನಿಲ ಚಾಕಲಬ್ಬಿ, ಆನಂದ ಕ್ವಾರಿ, ಕೃಷ್ಣ ಪೂಜೇರ, ಸಂಸ್ಥಾಪಕ ಅಧ್ಯಕ್ಷ ಈಶ್ವರ ಹಾಲಬಾವಿ, ಅಧ್ಯಕ್ಷ ವಿಶ್ವನಾಥ ಕುಂಬಾರ, ಕಾರ್ಯದರ್ಶಿ ಪ್ರಕಾಶ ಬಾಳಿಕಾಯಿ ಇತರರಿದ್ದರು. ಫಾತಿಮಾ ಕಡಕೋಳ ಪ್ರಾಸ್ತಾವಿಕ ಮಾತನಾಡಿದರು.

ಮುಖ್ಯ ಶಿಕ್ಷಕ ಎಂ.ಎನ್.ಸಿದ್ಧನಗೌಡ್ರ, ನಾಗರತ್ನಾ ಮುಧೋಳ, ಸುಶೀಲಾ ಕಬಾಡದ, ಸರೋಜಾ ಪತ್ತಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net