

ಮಾನ್ವಿ: ಳಿವಿನ ಅಂಚಿನಲ್ಲಿರುವ ಗ್ರಾಮೀಣ ಕ್ರೀಡೆಗಳಲ್ಲಿ ಯುವಕರು ಭಾಗವಹಿಸಿ ಸದೃಢರಾಗಬೇಕು ಎಂದು ರೈತ ಹನುಮಂತಪ್ಪಗೌಡ ಹೇಳಿದರು.
ನಕ್ಕುಂದಿ ಗ್ರಾಮದಲ್ಲಿ ಆಷಾಢ ಮಾಸದ ನಿಮಿತ್ತ ರೈತರಿಗಾಗಿ ಹಮ್ಮಿಕೊಂಡಿದ್ದ ತಿರುಗಲು ಬಂಡಿ, ಎತ್ತಿನ ಬಂಡಿ ಓಟದ ಸ್ಪರ್ಧೆಯಲ್ಲಿ ಶನಿವಾರ ಮಾತನಾಡಿದರು. ಮುಂಗಾರು ಆರಂಭದಲ್ಲಿ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಆಷಾಢ ಮಾಸದಲ್ಲಿ ಇಂತಹ ಸ್ಪರ್ಧೆ ಏರ್ಪಡಿಸಿ ಕೃಷಿ ಬಗ್ಗೆ ಆಸಕ್ತಿ ಮೂಡಿಸುವ ಕೆಲಸವಾಗಬೇಕು ಎಂದರು.
ಎತ್ತಿನ ಬಂಡಿ ಓಟದ ಸ್ಪರ್ಧೆಯಲ್ಲಿ 15 ಕ್ಕೂ ಹೆಚ್ಚು ರೈತರು ಜೋಡಿ ಎತ್ತುಗಳೊಂದಿಗೆ ಭಾಗವಹಿಸಿದ್ದರು. ಪ್ರಥಮ ಸ್ಥಾನ ಪಡೆದ ಎತ್ತುಗಳ ಮಾಲೀಕ ಮೌನೇಶ್ ಬಡಿಗೇರ್‌ಗೆ ಎಂಟು ತೊಲದ ಬೆಳ್ಳಿ ಕಡಗ, ದ್ವಿತೀಯ ಸ್ಥಾನ ಪಡೆದ ಎತ್ತುಗಳ ಮಾಲೀಕ ಆದೆಪ್ಪ ಬಲ್ಲಟಗಿಗೆ ಐದು ತೊಲ ಬೆಳ್ಳಿ ಕಡಗ, ತೃತೀಯ ಸ್ಥಾನ ಪಡೆದ ಎತ್ತುಗಳ ಮಾಲೀಕ ಎಸ್.ಬಸವರಾಜ್‌ಗೆ ಎರಡುವರೆ ತೊಲ ಬೆಳ್ಳಿ ಕಡಗ ಬಹುಮಾನವಾಗಿ ನೀಡಲಾಯಿತು.
ಪ್ರಮುಖರಾದ ಹನುಮಂತಪ್ಪಗೌಡ ಪೊಲೀಸ್ ಪಾಟೀಲ್, ಭೀಮಣ್ಣ, ಬಸವರಾಜ್ ಅಗಸೆ ಮುಂದಿನ, ಮಾಂತೇಶ, ಅಂಬಣ್ಣ, ಅಮರಪ್ಪ, ನಾಗರಾಜ, ಮುದುಕಪ್ಪ, ಶಿವಪುತ್ರಪ್ಪ, ಶರಣಪ್ಪ, ಚಂದ್ರಪ್ಪ, ಎ.ಕೇಮ್ರಾಜ್, ಅಮಾತೆಪ್ಪ, ಅಮರಪ್ಪ ಹಾಗೂ ರೈತರು ಇದ್ದರು.