

ಕಿಕ್ಕೇರಿ: ಕ್ರಿಕೆಟ್‌ಗೆ ಸಮಾನವಾಗಿ ದೇಶಿ ಕ್ರೀಡೆ ಕಬಡ್ಡಿ ಬೆಳೆಯುತಿದ್ದು, ಉಳಿಸಿ ಬೆಳೆಸಲು ಯುವಕರು ಮುಂದಾಗಬೇಕು ಎಂದು ಆರ್‌ಟಿಒ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ತಿಳಿಸಿದರು.
ಹೋಬಳಿಯ ಬೋಳಮಾರನಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಯುವಕರ ಸಂಘ ಹಾಗೂ ಡಾ. ಸೂರಜ್ ರೇವಣ್ಣ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಈಚೆಗೆ ನಡೆದ ಯುಗಾದಿ ಕಪ್ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಸಮಾರಂಭದಲ್ಲಿ ಮಾತನಾಡಿದರು. ಹಿಂದೆ ಆಟ ಆಡುವ ಮಕ್ಕಳಿಗೆ ಪಾಲಕರು ಬೈಯುತ್ತಿದ್ದರು. ಇಂದು ಎಲ್ಲವೂ ಬದಲಾಗಿದೆ. ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಗೌರವ, ಎಲ್ಲ ರೀತಿಯ ಮನ್ನಣೆ ದೊರೆಯುತ್ತಿದೆ. ಎಲೆಮರೆ ಕಾಯಿಯಂತಹ ಗ್ರಾಮಿಣ ಪ್ರತಿಭೆಗಳನ್ನು ಗುರ್ತಿಸುವ ಕೆಲಸವಾಗಬೇಕು ಎಂದರು.
ಇಂದು ಕಬಡ್ಡಿ ರಾಷ್ಟ್ರೀಯ ಕ್ರೀಡೆಯಾಗಿದೆ. ಇದು ನಮ್ಮ ಭಾರತದ ಹೆಮ್ಮೆ ಕೂಡ. ಕ್ರೀಡೆಯಲ್ಲಿ ಬೇಕಿರುವುದು ಸ್ಪರ್ಧಾ ಮನೋಭಾವ. ಸೋಲು-ಗೆಲವಿಗೆ ಚಿಂತಿಸಬಾರದು. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಕಲೆ, ಜಾನಪದ ಸೊಗಡು ಇದೆ. ಸ್ವಾಭಾವಿಕವಾಗಿ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡುವ ದೈಹಿಕ ಶಕ್ತಿ ಇದೆ. ಇವರಿಗೆ ಸರಿಯಾದ ತರಬೇತು ಬೇಕಿದೆ. ಹೆಚ್ಚು ದೇಶಿ ಕ್ರೀಡೆಗಳನ್ನು ಆಯೋಜಿಸಿ. ಗ್ರಾಮದಲ್ಲಿನ ಸಾಮರಸ್ಯಕ್ಕೆ ಮುಂದಾಗಿ ಎಂದು ಮನವಿ ಮಾಡಿದರು.
ಗ್ರಾಪಂ ಸದಸ್ಯ ಪ್ರಕಾಶ್, ಮುಖಂಡರಾದ ಬಿ.ಎಸ್. ಮಂಜುನಾಥ್, ಶಂಕರಲಿಂಗೇಗೌಡ, ಚಿಕ್ಕಲಿಂಗೇಗೌಡ, ಬಿ.ಎಸ್. ಪುಟ್ಟೇಗೌಡ, ಚಂದ್ರಶೇಖರ್, ಪದ್ಮನಾಭೇಗೌಡ, ಅಣ್ಣಸ್ವಾಮಿ, ಮಂಜಣ್ಣ, ಬಸವಣ್ಣ, ರಾಮಕೃಷ್ಣ, ಗುರುಲಿಂಗೇಗೌಡ, ಶ್ರೀನಿವಾಸ್, ಬಿ.ಎಸ್. ಪುಟ್ಟೇಗೌಡ, ಅಶ್ವಥ್, ಬಿ.ಎನ್. ರಾಮೇಗೌಡ, ಬಿ.ಎಸ್. ಮಹೇಶ್, ಸತೀಶ್, ಪುಟ್ಟಪ್ಪ ಮಂಜುನಾಥ್, ಕುಮಾರ, ಬೋಜಪ್ಪ, ರಕ್ಷಿತ್ ಮತ್ತಿತರರಿದ್ದರು.