ಕಲಾವಿದರ ಏಳಿಗೆಗೆ ಪ್ರೋತ್ಸಾಹ ಅಗತ್ಯ

20 08 2025_BGR_RURAL-PAGE_02
ನೆಲಮಂಗಲದ ಅಡೇಪೇಡೆಯ ಶ್ರೀ ಮರಿಯಕ್ಕ ದೇವಾಲಯದ ಬಳಿ ಮಾಸ್ಟರ್​ ವರ್ಕ್ಸ್​ ಶೀರ್ಷಿಕೆಯಡಿ ಆಯೋಜಿಸಿದ್ದ ಆರ್ಟ್ಸ್​ ಗ್ಯಾಲರಿಯನ್ನು ನಗರಸಭೆ ಅಧ್ಯಕ್ಷ ಎನ್​.ಗಣೇಶ್​ ಉದ್ಘಾಟಿಸಿದರು. ನಿಟಕಪೂರ್ವ ಅಧ್ಯೆ ಪೂರ್ಣಿಮಾ ಸುಗ್ಗರಾಜು, ರಾಜ್ಯ ಚಿತ್ರಕಲಾ ಶಿಕ್ಷಕರ ಸಂದ ಪ್ರಧಾನ ಕಾರ್ಯದರ್ಶಿ ಅಪ್ಪಸಾಹೇಬ್​ ಗಾಣೀಗರ್​, ನಿರ್ದೇಶಕ ಗೋವರ್ಧನ್​ ಇದ್ದರು.
Published on

ನೆಲಮಂಗಲ : ದೇಶ ಹಾಗೂ ನಾಡಿನ ಕಲೆ ಸಾಹಿತ್ಯ ಮತ್ತು ಸಂಸತಿ ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಕಲಾವಿದರ ಪಾತ್ರ ಪ್ರಮುಖವಾದದ್ದು ಎಂದು ನಗರಸಭೆ ಅಧ್ಯಕ್ಷ ಎನ್​.ಗಣೇಶ್​ ತಿಳಿಸಿದರು. ನಗರದ ಅಡೇಪೇಡೆಯ ಶ್ರೀ ಮರಿಯಕ್ಕ ದೇವಾಲಯದ ಬಳಿ ಮಾಸ್ಟರ್​ ವರ್ಕ್ಸ್​ ಶೀರ್ಷಿಕೆಯಡಿ ಆಯೋಜಿಸಿದ್ದ ಆರ್ಟ್ಸ್​ ಗ್ಯಾಲರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಚಿತ್ರಕಲೆ ಮೂಲಕ ಅನೇಕ ಕಲಾವಿದರು ಜನಮಾನಸದಲ್ಲಿ ಉಳಿಸಿದ್ದಾರೆ. ಕಲಾವಿದರು ಅಭಿನಯಿಸಿದ ಚಿತ್ರಗಳು ಅವರು ಅಗಲಿದ ಬಳಿಕವೂ ನಮ್ಮೊಂದಿಗೆ ಜೀವಂತವಾಗಿವೆ. ಅದ್ದರಂತೆ ನಗರದ ಹೃದಯ ಭಾಗದಲ್ಲಿ ಅತ್ಯಂತ ಸುಂದರವಾದ ಆರ್ಟ್ಸ್​ ಗ್ಯಾಲರಿ ನಿರ್ಮಾಣ ಮಾಡಿರುವುದು ಶ್ಲಾನೀಯ. ಪ್ರಸ್ತುತ ಸಮಾಜದಲ್ಲಿ ಕಲಾವಿದರು ಕಷ್ಟಕರ ಜೀವನ ನಡೆಸುತ್ತಿದ್ದು, ಅವರಿಗೆ ಪ್ರೋತ್ಸಾಹದ ಜತೆಗೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.

ಉದ್ಯಾನವನಗಳಲ್ಲಿ ಚಿತ್ರಕಲೆ: ನಗರಸಭೆ ವ್ಯಾಪ್ತಿಯಲ್ಲಿ ಉದ್ಯಾನವಗಳ ಅಭಿವೃದ್ಧಿ ಕಾರ್ಯ ಚಾಲ್ತಿಯಲ್ಲಿದ್ದು, ಉದ್ಯಾನವನ ಹಾಗೂ ನಗರದ ಕೆಲ ಪ್ರದೇಶದಲ್ಲಿ ಕಲಾವಿದರಿಂದ ಉತ್ತಮ ಚಿತ್ರಕಲೆ ಬಿಡಿಸುವ ಗುರಿ ಹೊಂದಿದೆ. ಮುಂದಿನ ದಿನಗಳಲ್ಲಿ ಶಾಸಕರ ಮಾರ್ಗದರ್ಶನದಲ್ಲಿ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಈ ನಿಟ್ಟಿನಲ್ಲಿ ಚಿತ್ರಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಮಾಡುವುದಾಗಿ ನಗರಸಭೆ ಅಧ್ಯಕ್ಷ ಎನ್​. ಗಣೇಶ್​ ಹೇಳಿದರು.

ರಾಜ್ಯ ಚಿತ್ರಕಲಾ ಶಿಕ್ಷಕರ ಸಂದ ಅಧ್ಯಕ್ಷ ಡಾ.ಬಿ.ಜೆ.ಅವಟಿ ಮಾತನಾಡಿ, ಸಮಾಜದಲ್ಲಿ ಕಲೆ ಮರೆಯಾಗದಂತೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು. ಈ ಹಿಂದೆ ರಾಜಮನೆತನಗಳು ಕಲಾವಿದರಿಗೆ ರಾಜಾಶ್ರಯ ನೀಡಿ ಕಲೆಯನ್ನು ಪ್ರೋತ್ಸಾಹಿಸುತ್ತಿದ್ದರು. ಅದ್ದರಿಂದ ಪ್ರಸ್ತುತ ರಾಜಕೀಯ ವ್ಯಕ್ತಿಗಳು ಕಲಾವಿದರನ್ನು ಪ್ರೋತ್ಸಾಹಿಸಿ ಬದುಕು ಕಟ್ಟಿಕೊಳ್ಳಲು ಹಾಗೂ ಕಲೆಗಳನ್ನು ಸಂರಕ್ಷಣೆಗೆ ಮುಂದಾಗಬೇಕು ಎಂದರು. ಕನ್ನಡ ಸಾಂಸತಿಕ ರಂಗದ ಅಧ್ಯಕ್ಷ ಡಿ.ಸಿದ್ದರಾಜು, ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಎಂ.ವಿ.ನೆಗಳೂರು, ಸಾಹಿತಿ ಎನ್​.ಜಿ.ಗೋಪಾಲ್​, ಡಾ.ವೆಂಕಟೇಶ್​ ಆರ್​.ಚೌಥಾಯಿ, ಡಾ.ವೇದಾವತಿ ಸುಬ್ರಹ್ಮಣ್ಯಂ, ಮಾರುತಿ, ಆನಂದ್​ಮೌರ್ಯ, ವೀಣಾ, ಸಾಯಿ ಟ್ರಸ್ಟ್​ ಅಧ್ಯಕ್ಷ ನರಸಿಂಹಮೂರ್ತಿ, ಮುಖಂಡ ಕೆ.ವಸಂತ್​, ಗಿರೀಶ್​ ಶರಣಪ್ಪಗೌಡ ಇದ್ದರು.

ಆರ್ಟ್ಸ್​ ವಿಲೇಜ್​ ಸ್ಥಾಪನೆ : ರಾಜ್ಯದ ಪ್ರತಿಯೊಂದು ಇತಿಹಾಸ ಪ್ರಸಿದ್ಧ ಸ್ಥಳದ ಚಿತ್ರವನ್ನು ರಚಿಸಿ ವಸ್ತು ಪ್ರದರ್ಶನ ಮಾಡಲಾಗುವುದು. ಜತೆಗೆ ದೇಶ ವಿದೇಶದಿಂದಲ್ಲೂ ಕಲಾವಿದರು ಹಾಗೂ ಪ್ರವಾಸಿಗರು ಭೇಟಿ ನೀಡುವಂತಹ ವಿಶಾಲ ಆರ್ಟ್ಸ್​ ವಿಲೇಜ್​ ನಿರ್ಮಾಣಕ್ಕೆ ಈಗಾಗಲೇ ಸಿದ್ಧತೆ ನಡೆಸಲಾಗಿದೆ ಎಂದು ರಾಜ್ಯ ಚಿತ್ರಕಲಾ ಶಿಕ್ಷಕರ ಸಂದ ಅಧ್ಯಕ್ಷ ಡಾ.ಬಿ.ಜೆ.ಅವಟಿ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net