ಸಮಾಜಮುಖಿ ಕಾರ್ಯಕ್ಕೆ ಉತ್ತೇಜನ, ಕುಡ್ಪಿ ಅರವಿಂದ್ ಶೆಣೈ ಆಶಯ

mng-21mar-lions
ಲಯನ್ಸ್ ಜಿಲ್ಲೆ 317-ಡಿ ಗರ್ವನರ್ ಡಾ.ಮೆಲ್ವಿನ್ ಡಿಸೋಜ ಲಯನ್ಸ್ ಕ್ಲಬ್ ಮಂಗಳೂರು ಆದಿತ್ಯವನ್ನು ಉದ್ಘಾಟಿಸಿದರು. ಜಿಲ್ಲಾ ಉಪ ಗವರ್ನರ್ ಕುಡ್ಪಿ ಅರವಿಂದ್ ಶೆಣೈ, ಲಯನ್ಸ್ ಕ್ಲಬ್ ಕಂಕನಾಡಿ ಪಡೀಲ್ ಅಧ್ಯಕ್ಷ ಕರುಣಾಕರ ಎಂ.ಎಚ್., ನೂತನ ಕ್ಲಬ್ ಅಧ್ಯಕ್ಷ ರೋಷನ್ ಬಾಳಿಗ, ಕಾರ್ಯದರ್ಶಿ ಡಾ.ಮೇಘಾ ಗೋಕುಲ್ ಮೊದಲಾದವರು ಉಪಸ್ಥಿತರಿದ್ದರು.
Published on

ಮಂಗಳೂರು: ಲಯನ್ಸ್ ಕ್ಲಬ್ ಕಂಕನಾಡಿ ಪಡೀಲ್ ಪ್ರಾಯೋಜಕತ್ವದಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಜಿಲ್ಲೆ 317 ಡಿ ಇದರ 119ನೇ ಕ್ಲಬ್ ಲಯನ್ಸ್ ಕ್ಲಬ್ ಮಂಗಳೂರು ಆದಿತ್ಯ ಇದರ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ಜರುಗಿತು. ಲಯನ್ಸ್ ಜಿಲ್ಲೆ 317-ಡಿ ಗರ್ವನರ್ ಡಾ.ಮೆಲ್ವಿನ್ ಡಿಸೋಜ ಉದ್ಘಾಟಿಸಿದರು.

ಜಿಲ್ಲಾ ಉಪ ಗವರ್ನರ್ ಕುಡ್ಪಿ ಅರವಿಂದ್ ಶೆಣೈ ಪದಾಧಿಕಾರಿಗಳಿಗೆ ಜವಾಬ್ದಾರಿಯ ಮಾಹಿತಿ ನೀಡಿ ಕ್ಲಬ್ ಇನ್ನಷ್ಟು ಸಮಾಜಮುಖಿ ಕಾರ್ಯಕ್ಕೆ ಉತ್ತೇಜನ ನೀಡಲಿ ಎಂದು ಸಲಹೆ ನೀಡಿದರು. ಲಯನ್ಸ್ ಕ್ಲಬ್ ಕಂಕನಾಡಿ ಪಡೀಲ್ ಅಧ್ಯಕ್ಷ ಕರುಣಾಕರ ಎಂ.ಎಚ್. ಅಧ್ಯಕ್ಷತೆ ವಹಿಸಿದ್ದರು. ನೂತನ ಕ್ಲಬ್ ಅಧ್ಯಕ್ಷರಾಗಿ ರೋಷನ್ ಬಾಳಿಗ, ಕಾರ್ಯದರ್ಶಿಯಾಗಿ ಡಾ.ಮೇಘಾ ಗೋಕುಲ್ ಮತ್ತು ಖಜಾಂಚಿಯಾಗಿ ಯಶ್ಮಿತಾ ಅಶ್ವಿನ್ ಅಧಿಕಾರ ಸ್ವೀಕರಿಸಿದರು.

ಜಿಲ್ಲಾ ಸಂಪುಟ ಕಾರ್ಯದರ್ಶಿ ಒಸ್ವಾಲ್ಡ್ ಡಿಸೋಜ, ಖಜಾಂಜಿ ಸುಧಾಕರ ಶೆಟ್ಟಿ, ಚೇರ್‌ಪರ್ಸನ್‌ಗಳಾದ ಮಮತಾ ಗೌರ್, ಉಮಾ ಬಿ.ಹೆಗ್ಡೆ, ಎಡ್ವಿನ್ ವಾಲ್ಟರ್, ಎಂ.ಬಾಲಕೃಷ್ಣ ಹೆಗ್ಡೆ, ಮೋಹಿನಿ ಆರ್.ಶೆಟ್ಟಿ, ಮಾಜಿ ಗರ್ವನರ್‌ಗಳಾದ ಜೆ.ಕೆ.ರಾವ್, ಅರುಣ್ ಶೆಟ್ಟಿ ಮತ್ತು ರೊನಾಲ್ಡ್ ಗೋಮ್ಸ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net