ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರೋತ್ಸಾಹ

h23-Maha Mandal
Published on

ಹುಬ್ಬಳ್ಳಿ: ಗಣೇಶೋತ್ಸವ ಸಮಿತಿಗಳ ಮಹಾಮಂಡಳವು ಬರೀ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ಪ್ರೋತ್ಸಾಹ ನೀಡುತ್ತಿಲ್ಲ. ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಸಹಕರಿಸುತ್ತಿದೆ ಎಂದು ಮೂರುಸಾವಿರ ಮಠದ ಶ್ರೀಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಬಣ್ಣಿಸಿದರು.

ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ವತಿಯಿಂದ ನಗರದ ಮೂರುಸಾವಿರ ಮಠದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಬಹುಮಾನ ವಿತರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸುವ ಕಾರ್ಯ ಮಾಡುತ್ತಿದೆ. ಸನ್ಮಾನಿತಗೊಂಡವರ ಸಾಮಾಜಿಕ ಕಾರ್ಯಗಳನ್ನು ತಿಳಿಸಿಕೊಟ್ಟು ಸಮಸಮಾಜ ನಿರ್ಮಾಣ ಮಾಡುತ್ತಿದೆ ಎಂದರು.

ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾತನಾಡಿ, ಮಹಾಮಂಡಳವು ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಎಲ್ಲರೂ ಸಂಘಟಿತರಾಗಲು ಪ್ರೇರೇಪಿಸುತ್ತಿದೆ ಎಂದರು.

ಮಹಾಮಂಡಳ ಅಧ್ಯಕ್ಷ ಮೋಹನ ಲಿಂಬಿಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪಂ. ಶಂಕರಭಟ್ಟ ದಿವಾಕರ, ಬಸಪ್ಪ ಹುಬ್ಬಳ್ಳಿ, ವಿಠ್ಠಲ ಲದವಾ, ಶಂಕರಾಚಾರ್ಯ ಕಡ್ಲಾಸ್ಕರ, ಕೃಷ್ಣಿ ಶಿರೂರ, ಮಂಜುನಾಥಗೌಡ ಪಾಟೀಲ(ಹರಕುಣಿ), ಶ್ರೀನಿವಾಸ ಏಕಬೋಟೆ, ಕಿರಣ ಶೇರಖಾನಿ, ಸಮೃದ್ಧಿ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಹಿರಿಯ ಕಲಾವಿದರಾದ ಈರಣ್ಣ ಪಾಳೇದ, ಸಾಯಿನಾಥ ಹಿತ್ತಾಳಿ, ಅಶೋಕ ಬೆಳ್ಳಿಗಟ್ಟಿ, ಸಿದ್ದಪ್ಪ ಅಂಗಡಿ, ಚಿದಾನಂದ ತೆಗ್ಗಿಹಳ್ಳಿ, ಅನಿಲ್ ಕವಿಶೆಟ್ಟಿ, ಎಂ.ಎಸ್. ಶಿರಗಣ್ಣವರ, ಜಯಕುಮಾರ ಮುರಗೋಡ, ವಿಶ್ವನಾಥ ಹಿತ್ತಾಳಿ, ಚಂದ್ರಶೇಖರ ಗಾಣಿಗೇರ, ಅನಿಲ ಬೇವಿನಕಟ್ಟಿ, ರೋಹನ ಗೊಂದಕರ, ಹರೀಶ ಭರಾಡೆ, ಸಂತೋಷ ಕಟ್ಟಿ, ಶಾಂತಪ್ಪ ನವಲಗುಂದ, ಮೌನೇಶ ಅರ್ಕಸಾಲಿ, ರೋಹಿತ ಗೊಂದಕರ, ಗುರುನಾಥ ಪತ್ತಾರ, ಸರಸ್ವತಿ ಮೇಹರವಾಡೆ ಅವರನ್ನು ಗೌರವಿಸಲಾಯಿತು. ನಗರದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳ ಸಮಿತಿಯವರಿಗೆ ವಿವಿಧ ಬಹುಮಾನ ನೀಡಲಾಯಿತು.

ಮಹಾಮಂಡಳದ ಉಪಾಧ್ಯಕ್ಷರಾದ ಅಲ್ತಾಫ ಕಿತ್ತೂರ, ಶಾಂತರಾಜ ಪೋಳ, ಗೌರವ ಕಾರ್ಯದರ್ಶಿಗಳಾದ ಅಮರೇಶ ಹಿಪ್ಪರಗಿ, ಎಸ್.ಎಸ್. ಕಮಡೊಳ್ಳಿಶೆಟ್ರು, ಉದ್ಯಮಿ ನಾರಾಯಣಸಾ ನಿರಂಜನ, ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ಎಂ.ಎಸ್. ಬಾಣದ, ಚನ್ನಬಸಪ್ಪ ಧಾರವಾಡಶೆಟ್ಟರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net