ಕನ್ನಡ ಕಾರ್ಯಕ್ರಮಗಳಿಗೆ ಪ್ರೋತ್ಸಾಹ

kasapa
ಚಿಕ್ಕಮಗಳೂರು ಜಿಲ್ಲಾ ಕಸಾಪದಿಂದ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರನ್ನು ಅಭಿನಂದಿಸಲಾಯಿತು. ಸೂರಿ ಶ್ರೀನಿವಾಸ್, ಭಗವತಿ ಹರೀಶ್, ಎಸ್.ಎಸ್.ವೆಂಕಟೇಶ್, ಎಸ್.ಎಂ.ಲೋಕೇಶಪ್ಪ, ಜಯಂತಿ ಇತರರಿದ್ದರು.
Published on

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸುವ ಕಾರ್ಯಕ್ರಮಗಳಿಗೆ ಸಹಕಾರ ನೀಡುವುದಾಗಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.

ಜಿಲ್ಲಾ ಕಸಾಪದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದು 40 ವರ್ಷಗಳಾಗಿವೆ. ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲೆಯಲ್ಲಿ ಆಯೋಜಿಸಿದ್ದಲ್ಲಿ ಜಿಲ್ಲಾಡಳಿತದಿಂದ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಸಮ್ಮೇಳನದ ಬಗ್ಗೆ ರಾಜ್ಯ ಪರಿಷತ್‌ನೊಂದಿಗೆ ಚರ್ಚಿಸಲಾಗುವುದು. ಒಪ್ಪಿಗೆ ನೀಡಿದರೆ ಜಿಲ್ಲಾಡಳಿತ ಸಹಕಾರ ಬೇಕು ಎಂದು ಮನವಿ ಮಾಡಿದರು.
ಕಸಾಪ ಪದಾಧಿಕಾರಿಗಳಾದ ಭಗವತಿ ಹರೀಶ್, ಕಮಲ್‌ಚಂದ್, ಎಸ್.ಎಸ್.ವೆಂಕಟೇಶ್, ಜಿ.ಬಿ.ಪವನ್, ಬಿ.ಆರ್.ಜಗದೀಶ್, ಎಚ್.ಸಿ.ನಟರಾಜ್, ಬಿ.ಎಚ್.ಸೋಮಶೇಖರ್, ಸಚಿನ್ ಸಿಂಗ್, ಪ್ರಭುಸೂರಿ, ಎಸ್.ಎಂ.ಲೋಕೇಶಪ್ಪ, ಜಯಂತಿ ಶಿವಾಜಿ, ಮಲ್ಲಿಕಾದೇವಿ, ಶ್ರೀನಿವಾಸ್, ಮಂಜುನಾಥ್, ಜಗದೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net