ಪ್ರಧಾನಿ ಮೋದಿಯಿಂದ ಆಯುರ್ವೇದಕ್ಕೆ ಪ್ರೋತ್ಸಾಹ

h11-health camp
Published on

ಹುಬ್ಬಳ್ಳಿ: ಕ್ಷಮತಾ ಸೇವಾ ಸಂಸ್ಥೆ, ಎಂ.ಎಂ. ಜೋಶಿ ಆಸ್ಪತ್ರೆ ಸಹಯೋಗದಲ್ಲಿ ನಗರದ ಘಂಟಿಕೇರಿ ಓಣಿಯ 5ನೇ ನಂಬರ್ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಉಚಿತ ಯೋಗ ಹಾಗೂ ಬೃಹತ್ ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು.
ನರರೋಗ ತಜ್ಞ ಡಾ. ಕ್ರಾಂತಿಕಿರಣ ಉದ್ಘಾಟಿಸಿ ಮಾತನಾಡಿ, ಆಯುಷ್ ಸಚಿವಾಲಯ ಸ್ಥಾಪಿಸುವ ಮೂಲಕ 5 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಆಯುರ್ವೇದ ವೈದ್ಯಕೀಯ ಪರಂಪರೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುಂಚೂಣಿಗೆ ತಂದರು ಎಂದರು.
ಕ್ಷಮತಾ ಸೇವಾ ಸಂಸ್ಥೆಯ ಸಂಚಾಲಕ ಗೋವಿಂದ ಜೋಶಿ, ಎಂ.ಎಂ. ಜೋಶಿ ಆಸ್ಪತ್ರೆ ನಿರ್ದೇಶಕ ಡಾ. ಶ್ರೀನಿವಾಸ ಜೋಶಿ ಮಾತನಾಡಿದರು. ಡಾ. ರವೀಂದ್ರ ಯಲಕಾನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತಂಜಲಿ ಯೋಗ ಕೇಂದ್ರದ ಯೋಗಪಟು ಡಾ. ರಾಜು ಟೋಂಗ್ರೆ ಅವರು ಯೋಗಪ್ರದರ್ಶನ ನೀಡಿದರು. 30 ಜನರನ್ನು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. 400 ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಡಾ. ಮಂಜುನಾಥ ನಾಯಕ, ಡಾ. ಮಹೇಶ ಸಾಲಿಮಠ, ಡಾ. ವಿನಕುಮಾರ ಹಿರೇಮಠ, ಡಾ. ಭರತ ದಿವಟೆ, ಡಾ. ಸೌರಭ ಕೊಕಟನೂರ, ಡಾ. ಸಂದೀಪ ದೇಸಾಯಿ, ಡಾ. ಆಯಿಶಾ ಕಾಜಿ, ಡಾ. ಅಕ್ಷಯಕುಮಾರ ಚೋಳಿನ, ಡಾ. ಪಲ್ಲವಿ, ಡಾ. ನಂದಿತಾ, ಡಾ. ಸುಮಾ, ಡಾ. ರಂಜೀವ ಕುಮಾರ, ಡಾ. ವಿದ್ಯಾ ಬೆಳವಡಿ, ಡಾ.ಕೆ.ಎಸ್. ಸಮೀರಕುಮಾರ, ಡಾ. ಸಾಂದೀಪನಿ ಬಂಕಾಪುರ, ಡಾ. ಎಚ್. ಓ. ಮೃತ್ಯುಂಜಯ, ಡಾ. ಚಂದ್ರಶೇಖರ ಪಾಟೀಲ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net