ಉತ್ಸವದಿಂದ ಕಲೆ, ಸಂಸ್ಕೃತಿಗೆ ಪ್ರೋತ್ಸಾಹ

MUNDARAGI UTSAV
Published on

ಮುಂಡರಗಿ: ಪಟ್ಟಣದ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ಮುಂಡರಗಿ ಉತ್ಸವ ಸಮಿತಿ ವತಿಯಿಂದ ಶನಿವಾರ ಸಾಂಕೇತಿಕವಾಗಿ ಮುಂಡರಗಿ ಉತ್ಸವ ಆಚರಿಸಲಾಯಿತು. ಶ್ರೀ ಭುವನೇಶ್ವರಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಧ್ವಜಾರೋಹಣ ನೆರವೇರಿಸಿದರು.

ಆಶೀರ್ವಚನ ನೀಡಿದ ಡಾ. ಅನ್ನದಾನೀಶ್ವರ ಶ್ರೀಗಳು, `ಉತ್ಸವದ ಮೂಲಕ ಕಲೆ, ಸಾಹಿತ್ಯ, ಸಂಸ್ಕೃತಿಗೆ ಪ್ರೋತ್ಸಾಹ ನೀಡುವಂತಹ ಕೆಲಸವಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಮುಂಡರಗಿ ಉತ್ಸವ ಆಗಬೇಕು. ಇತಿಹಾಸ ಪರಂಪರೆ ಯುವಪೀಳಿಗೆಗೆ ತಿಳಿಸುವ ಕೆಲಸ ನಡೆಯಬೇಕು. ಭಾರತದೆಲ್ಲೆಡೆ ಸ್ವಾತಂತ್ರೊö್ಯÃತ್ಸವ ಅಮೃತ ಮಹೋತ್ಸವವನ್ನು ಆಚರಿಸಿದ ರೀತಿಯಲ್ಲಿ ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ ಎಲ್ಲೆಡೆ ಸಂಭ್ರಮದಿAದ ಆಚರಿಸಬೇಕು' ಎಂದರು.

ಮುAಡರಗಿ ಉತ್ಸವ ಸಮಿತಿ ಅಧ್ಯಕ್ಷ ವೈ.ಎನ್. ಗೌಡರ ಮಾತನಾಡಿ, ೨೦೧೧ರಲ್ಲಿ ಮುಂಡರಗಿ ಉತ್ಸವ ೨ದಿನ ಅದ್ದೂರಿಯಾಗಿ ಆಚರಿಸಲಾಗಿತ್ತು. ನಂತರ ಭೀಕರ ಬರಗಾಲ, ಕರೊನಾ ಹಿನ್ನೆಲೆಯಲ್ಲಿ ಅದ್ದೂರಿ ಉತ್ಸವ ಆಚರಿಸಲಾಗಿಲ್ಲ.

ಬರುವ ನವೆಂಬರ್‌ನಲ್ಲಿ ೩ ದಿನಗಳವರೆಗೆ ಮುಂಡರಗಿ ಉತ್ಸವ ಆಯೋಜಿಸುವ ಬಗ್ಗೆ ಚರ್ಚಿಸಲಾಗಿದೆ. ಪ್ರತಿಯೊಬ್ಬರ ಸಹಕಾರದೊಂದಿಗೆ ಜಾತ್ಯತೀತ, ಪಕ್ಷಾತೀತವಾಗಿ ಉತ್ಸವವನ್ನು ಆಚರಿಸೋಣ ಎಂದರು.

ವಿ.ಎಲ್. ನಾಡಗೌಡ್ರ, ಎ.ಕೆ. ಬೆಲ್ಲದ, ಕರಬಸಪ್ಪ ಹಂಚಿನಾಳ, ಜಿ.ವಿ. ಹಿರೇಮಠ, ಎ.ವೈ. ನವಲಗುಂದ, ಕೊಟ್ರೇಶ ಅಂಗಡಿ, ಕಾಂತರಾಜ ಹಿರೇಮಠ, ಶಿವಪ್ಪ ಚಿಕ್ಕಣ್ಣವರ, ನಾಗೇಶ ಹುಬ್ಬಳ್ಳಿ, ಸುಭಾಸ ಗುಡಿಮನಿ, ಪಾಲಾಕ್ಷಿ ಗಣದಿನ್ನಿ, ರುದ್ರಗೌಡ ಪಾಟೀಲ, ಅಶೋಕ ಹುಬ್ಬಳ್ಳಿ, ಎಸ್.ಎಸ್. ಗಡ್ಡದ, ವೈ.ಎಚ್. ಬಚನಹಳ್ಳಿ, ಆರ್.ವೈ. ಪಾಟೀಲ, ಯಲ್ಲಪ್ಪ ಹುಲಗೇರಿ, ರಾಮು ಭಜಂತ್ರಿ, ಸೊಲಬಣ್ಣ ಜೋಬಾಳಿ, ಶಂಕರ ಕಲ್ಲಕುಟಗರ, ಮಹ್ಮದರಫಿಕ್ ವಡ್ಡಟ್ಟಿ, ಅಶೋಕ ಮಾನೆ, ಉಮೇಶ ಕೊರಡಕೇರಿ, ಗಂಗಾಧರ ದೊಡ್ಡಮನಿ ಇತರರು ಇದ್ದರು. ಮಂಜುನಾಥ ಇಟಗಿ ಸ್ವಾಗತಿಸಿದರು. ಮಂಜುನಾಥ ಮುಧೋಳ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net