ಯಕ್ಷ ಸಂಘಟನೆಗಳನ್ನು ಪ್ರೋತ್ಸಾಹಿಸಿ: ಶಂಕರ ಶೆಟ್ಟಿ

16hosp (1)
ಹೊಸನಗರ ತಾಲೂಕು ಮಾರುತಿಪುರದಲ್ಲಿ ಏರ್ಪಡಿಸಿದ್ದ ಹನುಮದ್ದರ್ಶನ ತಾಳಮದ್ದಲೆಯನ್ನು ಶಂಕರ ಶೆಟ್ಟಿ ಉದ್ಘಾಟಿಸಿದರು. ನರಹರಿ ರಾವ್ ಕೊಪ್ಪರಿಗೆ, ಎಂ.ಎನ್.ಸುರೇಶ್, ಮಹಾಬಲೇಶ್ವರ ಭಟ್ ಇತರರಿದ್ದರು.
Published on

ಹೊಸನಗರ: ನಮ್ಮ ಕನ್ನಡದ ಕಲೆ ಯಕ್ಷಗಾನವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ನಿರಂತರ ಶ್ರಮವಹಿಸುತ್ತಿರುವ ಯಕ್ಷ ಸಂಘಟನೆಗಳಿಗೆ ಸಹೃದಯರು ಮತ್ತಷ್ಟು ಪ್ರೋತ್ಸಾಹ ನೀಡಬೇಕು ಎಂದು ಮಾರುತಿಪುರ ಗ್ರಾಪಂ ಸದಸ್ಯ ಶಂಕರ ಶೆಟ್ಟಿ ಹೇಳಿದರು.

ಕಾರಣಗಿರಿ ಗ್ರಾಮ ಭಾರತಿ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಮಾರುತಿಪುರದ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಸೂರ್ಯನಾರಾಯಣ ಮತ್ತು ತಂಡದವರು ಆಯೋಜಿಸಿದ್ದ ಹನುಮದ್ದರ್ಶನ ಯಕ್ಷಗಾನ ತಾಳಮದ್ದಲೆ ಉದ್ಘಾಟಿಸಿ ಮಾತನಾಡಿದರು.
ಇಂದಿನ ಕಾಲಘಟ್ಟದಲ್ಲಿ ಇಂತಹ ಕಲೆ ಸಂಘಟಿಸುವುದಕ್ಕೆ ಹಲವು ಸವಾಲುಗಳಿವೆ. ಆದರೂ ಆ ಕಾರ್ಯಕ್ಕೆ ದೇವರ ಅನುಗ್ರಹ ಇರಲಿದೆ ಎಂದ ಹೇಳಿದರು. ಹಿರಿಯ ಲೇಖಕ ನರಹರಿ ರಾವ್ ಕೊಪ್ಪರಿಗೆ, ಎಂ.ಎನ್.ಸುರೇಶ್, ಮಹಾಬಲೇಶ್ವರ ಭಟ್, ಎಂ.ಕೆ.ಅಮಿತ್ ಇತರರಿದ್ದರು.
ರಮೇಶ್ ಹೆಗಡೆ ಗುಂಡೂಮನೆ ರಚಿಸಿರುವ ಹನುಮದ್ದರ್ಶನ ಪ್ರಸಂಗವನ್ನು ಸೂರ್ಯನಾರಾಯಣ, ಸೃಜನ್ ಗಣೇಶ್ ಹಾಗೂ ಮಂಜುನಾಥ್ ಗುಡ್ಡೆದಿಂಬ ಅವರ ಹಿಮ್ಮೇಳದಲ್ಲಿ, ಅಶೋಕಕುಮಾರ್ ಹೆಗಡೆ, ರವಿಶಂಕರ ಭಟ್ ಮತ್ತು ರಮೇಶ್ ಹೆಗಡೆ ಗುಂಡೂಮನೆ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net