ಸಾಧಕ ಮಹಿಳೆಯರನ್ನು ಪ್ರೋತ್ಸಾಹಿಸಿ

26KDR1
Published on

ಕಡೂರು: ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮದೆ ಆದ ಛಾಪು ಮೂಡಿಸಿದ್ದಾರೆ ಎಂದು ಸಿಎಂಎಸ್‌ಎಸ್‌ಎಸ್‌ನ ಹಾಸನ ನಿರ್ದೇಶಕ ಫಾದರ್ ಅಲ್ವಿನ್ ಡಿಸೋಜಾ ಹೇಳಿದರು.

ಮಹಿಳಾ ದಿನಾಚರಣೆಯ ಅಂಗವಾಗಿ ಸಿಎಂಎಸ್‌ಎಸ್‌ಎಸ್ ಹಾಸನ ಹಾಗೂ ಜೀವನ್ ಜ್ಯೋತಿ ಒಕ್ಕೂಟದ ಮಹಿಳೆಯರು ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಹಾಗೂ ರಾಜಕೀಯವಾಗಿ ಸಾಧನೆ ಮಾಡಿ ಪ್ರಪಂಚದಲ್ಲಿಯೇ ತನ್ನ ಸ್ಥಾನವನ್ನು ಸುಭದ್ರವಾಗಿ ಕಾಪಾಡಿಕೊಂಡಿದ್ದಾಳೆ. ಇಂತಹ ಮಹಿಳೆಯರನ್ನು ಸಂಘ ಸಂಸ್ಥೆಗಳು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.

ಹನಿಕೇರ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಶೈಲಾ ಮೋಹನ್ ಮಾತನಾಡಿ, ಮಹಿಳೆ ಎಂದರೆ ಒಂದು ಶಕ್ತಿ. ನಗುವೇ ಅವಳಿಗೆ ಆಭರಣ. ಮಹಿಳೆ ಎಂದಿಗೂ ಇನ್ನೊಬ್ಬರಿಂದ ಬೇಡುವವಳಲ್ಲ. ಆಧುನಿಕ ಪ್ರಪಂಚದಲ್ಲಿ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದಾಳೆ. ಸಾವಿರಾರು ಮಹಿಳೆಯರಿಗೆ ಉದ್ಯೋಗ ನೀಡುವಂತಹ ಸಂಸ್ಥೆಗಳನ್ನು ತೆರೆದು ಉದ್ಯೋಗ ಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ ಎಂದರೆ ತಪ್ಪಾಗಲಾರದು ಎಂದರು.

ಕಡೂರು ಧರ್ಮಕೇಂದ್ರ ಗುರು ಫಾದರ್ ಜೋಸೆಪ್, ಜೆಸಿಐನ ಆಶಾ ಶ್ರೀನಿವಾಸ್, ಪ್ರೇಮ ಜ್ಯೋತಿ ಶಾಲೆ ಮುಖ್ಯಶಿಕ್ಷಕಿ ಅನಿತಾ, ಚಕ್ರವರ್ತಿ ಪಿಯು ಕಾಲೇಜಿನ ಉಪನ್ಯಾಸಕಿ ಉಷಾದೇವಿ, ಜೀವನ್ ಜ್ಯೋತಿ ಒಕ್ಕೂಟಗಳ ಕಾರ್ಯದರ್ಶಿ ಸೋನಿ, ನೇತ್ರಾ, ಕಲ್ಪನಾ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net