

ಹುಬ್ಬಳ್ಳಿ: ಶ್ರೀ ಜಂಗಮ ಕ್ಷೇಮಾಭಿವೃದ್ಧಿ ಸೇವಾ ಸಮಿತಿ ವತಿಯಿಂದ 2023-24ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ಜಂಗಮ ಸಮಾಜದ ವಿದ್ಯಾರ್ಥಿಗಳಿಗೆ ನಗರದಲ್ಲಿ ಇತ್ತೀಚೆಗೆ ಪುರಸ್ಕಾರ ನೀಡಲಾಯಿತು.
ಅಮ್ಮಿನಬಾವಿ ಪಂಚಗ್ರಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ,
ಜಂಗಮ ಸಮಾಜದ ಬಗ್ಗೆ ನಮಗೆ ಹೆಮ್ಮೆ ಇರಬೇಕು. ಯಾರಾದರೂ ಸಮಾಜದಲ್ಲಿ ಮುಂದೆ ಹೋಗುತ್ತಿದ್ದರೆ ಅವರಿಗೆ ಪ್ರೋತ್ಸಾಹಿಸಿ ಮುಂದೆ ಕಳುಹಿಸಬೇಕು. ಸಾಧ್ಯವಾದರೆ ಸಹಾಯ ಮಾಡಿ ಇಲ್ಲವಾದರೆ ಸುಮ್ಮನಿದ್ದು ಬಿಡಬೇಕು. ನಮ್ಮ ಸಮಾಜದ ಬಗ್ಗೆ ನಮಗೆ ಗೌರವ ಇದ್ದರೆ ಮಾತ್ರ ಮುಂದೆ ಬರಲು ಸಾಧ್ಯ ಎಂದರು.
ಶಿಕ್ಷಣ ಪಡೆಯುವುದೆಂದರೆ ಕೇವಲ ನಾವು ರ‌್ಯಾಂಕ್ ಪಡೆಯುವುದಲ್ಲ. ಇದರ ಜತೆಗೆ ನಮ್ಮ ಸಂಸ್ಕಾರ ಕಲಿಯಬೇಕು. ನಾವು ಮೊದಲು ಸದಾಚಾರಿಗಳು ಮತ್ತು ಸಂಸ್ಕಾರವಂತರಾಗಬೇಕು. ಅಂದಾಗ ಮಾತ್ರ ನಮ್ಮ ಸಮಾಜ ರಕ್ಷಿಸಲು ಸಾಧ್ಯ ಎಂದರು.
ಅತಿಥಿಗಳಾಗಿ ಆಗಮಿಸಿದ ವಿಜಯಪುರದ ಕಂಪ್ಯೂಟರ್ ಕನ್ನಡತಿ ಮತ್ತು ವಿಜಯವಾಣಿ ಸಾಧಕ ಮಹಿಳೆ ಪ್ರಶಸ್ತಿ ಪುರಸ್ಕೃತೆ ಭುವನೇಶ್ವರಿ ಸಿ. ಮೇಲಿನಮಠ ಮಾತನಾಡಿ, ಸಿಕ್ಕ ಅವಕಾಶಗಳನ್ನು ವಿದ್ಯಾರ್ಥಿಗಳು ಕೈಚೆಲ್ಲಬಾರದು. ಇಂಗ್ಲಿಷ್ ಕಲಿಕೆಗಿಂತ ಮಾತೃಭಾಷೆ ಕಲಿಕೆಗೆ ಒತ್ತು ನೀಡಬೇಕು. ಮಾತೃ ಭಾಷೆಯಲ್ಲಿ ನಮ್ಮ ಭಾವನೆ ವ್ಯಕ್ತಪಡಿಸುವುದು ಸುಲಭ ಎಂದರು.
ನಾಗರಾಜ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಅಲ್ಲಮಪ್ರಭು ಮೇಲಿನಮಠ, ಜಗದೀಶ ಕೂಡಲಮಠ, ಬಸಯ್ಯ ಹಿರೇಮಠ, ಚಂದ್ರಶೇಖರ ಕಳ್ಳಿಮಠ, ಶಾಂತಾ ಹಿರೇಮಠ, ವೀರಯ್ಯಸ್ವಾಮಿ ಸಾಲಿಮಠ, ಅಮೃತ ಹಿರೇಮಠ, ಎಸ್.ಎಸ್. ಸಾಲಿಮಠ, ಬಸಯ್ಯ ಹಡಗಲಿಮಠ, ಚನ್ನಯ್ಯ ಚೌಕಿಮಠ, ಉಮೇಶ ಹಿರೇಮಠ, ವೀರಣ್ಣ ಹಿರೇಹಾಳ, ಮಹೇಶ ಹಿರೇಮಠ, ಕುಮಾರಸ್ವಾಮಿ ಹಿರೇಮಠ, ಉಮೇಶ ಹಿರೇಹಾಳ, ಪಾರ್ವತಿ ಮಹಿಳಾ ಮಂಡಳದ ಸದಸ್ಯರು ಇತರರು ಉಪಸ್ಥಿತರಿದ್ದರು.
ಪ್ರಭಾವತಿ ನಿರೂಪಿಸಿದರು. ರಾಜು ಕೋರ್ಯಾಣಮಠ ಸ್ವಾಗತಿಸಿದರು. ನಿರ್ಮಲ ಹಿರೇಮಠ ಪ್ರತಿಭಾ ಪುರಸ್ಕಾರ ಕಾರ್ಯಕರಮ ನಡೆಸಿಕೊಟ್ಟರು.