ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಿ

11 kdr 2
Published on

ಕಡೂರು: ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ವೇದಿಕೆಗಳು ಲಭಿಸಿದಾಗ ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯ ಎಂದು ಪುರಸಭೆ ಅಧ್ಯಕ್ಷ ಭಂಡಾರಿಶ್ರೀ ನಿವಾಸ್ ಹೇಳಿದರು.

ಬಿಇಒ ಕಚೇರಿಯಲ್ಲಿ ತಾಲೂಕಿನ ಯಗಟಿಪುರದ ಕೆಂಬ್ರಿಡ್ಜ್ ಶಾಲೆ ಮಕ್ಕಳು ನ.15-20ರವರೆಗೆ ಮಧ್ಯಪ್ರದೇಶದಲ್ಲಿ ನಡೆಯಲಿರುವ ರಾಷ್ಟಮಟ್ಟದ ಕಬ್ಬಡಿ ಕ್ರೀಡಾಕೂಟಕ್ಕೆ ತೆರಳುವ ಕ್ರೀಡಾಪಟುಗಳಿಗೆ ಬಿಳ್ಕೋಡುಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ ತೋರುತ್ತಿರುವ ಮಕ್ಕಳಿಗೆ ಶಿಕ್ಷಕರು ಪ್ರೋತ್ಸಾಹಿಸಬೇಕು. ಕೇವಲ ಪಠ್ಯದ ಚಟುವಟಿಕೆಗಳಿಗಿಂತ ಪಠ್ಯೇತರ ದೇಸಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚು ಬೆಂಬಲಿಸಿದಾಗ ತಾಲೂಕಿನಲ್ಲಿ ಉತ್ತಮ ಕ್ರೀಡಾಪ್ರತಿಭೆಗಳನ್ನು ನಿರ್ಮಿಸಿದಂತಾಗಲಿದೆ. ಪಟ್ಟಣದಲ್ಲಿ ಕಳೆದ ತಿಂಗಳು ನಡೆದ ರಾಜ್ಯದ ಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ತಾಲೂಕಿನ ಕೆಂಬ್ರಿಡ್ಜ್ ಶಾಲೆಯ ಮಕ್ಕಳು ರಾಷ್ಟ ಮಟ್ಟದಲ್ಲೂ ಉತ್ತಮ ಪ್ರದರ್ಶನ ನೀಡಿ ಕಡೂರಿಗೆ ಕೀರ್ತಿ ತರುವಂತಾಗಬೇಕಿದೆ ಎಂದು ಹಾರೈಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಸಿದ್ದರಾಜುನಾಯ್ಕ್, ದೈಹಿಕ ಶಿಕ್ಷಣಾಧಿಕಾರಿ ನಾಗಾರಾಜ್, ಲಿಂಗರಾಜು, ದೈಹಿಕ ಶಿಕ್ಷಕರಾದ ಲತಾಮಣ , ಪಾಂಡುಕುಮಾರ್, ಮುರುಳಿ, ಆನಂದಪ್ಪ, ತಿಮ್ಮಪ್ಪ ದೈಹಿಕ ಶಿಕ್ಷಕ ಗೋಪಿ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net