

ಬಾಳೆಹೊನ್ನೂರು: ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವಜನರ ಮೇಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಗಡಿಗೇಶ್ವರ ಗ್ರಾಮದ ಶ್ರೀದುರ್ಗಿ ಮಾರಿಕಾಂಬಾ ್ರೆಂಡ್ಸ್ ನಿಂದ ಆಯೋಜಿಸಿದ್ದ ಕೆಸರುಗದ್ದೆ ಆಟೋಟ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಇಂದು ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿದ್ದು, ಅವುಗಳನ್ನು ಉಳಿಸಿ ಬೆಳೆಸಬೇಕಿದೆ. ಈ ಹಿಂದೆ ಗ್ರಾಮೀಣ ಆಟಗಳಾದ ಕೆಸರುಗದ್ದೆ, ಕಬಡ್ಡಿ, ಹಗ್ಗಜಗ್ಗಾಟ, ಕೋಲಾಟ, ಲಗೋರಿ, ಖೋಖೋ ಸೇರಿದಂತೆ ಹಲವಾರು ಕ್ರೀಡೆಗಳು ಪ್ರಚಲಿತದಲ್ಲಿ ಇದ್ದವು. ಇಂದು ಯುವಜನರು ಅವುಗಳನ್ನು ಮರೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಸರುಗದ್ದೆ ಆಟೋಟ ಸ್ಪರ್ಧೆ ಆಯೋಜಿಸಿ ಯುವಜನರು, ಗ್ರಾಮೀಣ ಜನರಿಗೆ ಅವುಗಳನ್ನು ನೆನೆಪಿಸುವ ಕೆಲಸ ಮಾಡಿರುವುದು ಶ್ಲಾಘನೀಯವಾಗಿದೆ ಎಂದರು.
ಎನ್.ಆರ್.ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರುಬೈಲು ನಟರಾಜ್, ಪ್ರಮುಖರಾದ ಚನ್ನಪ್ಪಗೌಡ ನಿಡುಗೋಡು, ಶ್ರೀನಿವಾಸಗೌಡ ಬಿಳುಕೊಪ್ಪ, ನಾರಾಯಣ ಪೂಜಾರಿ ಗಡಿಗೇಶ್ವರ, ಕರುಣಾಕರ ಗೌಡ, ಕೃಷ್ಣಮೂರ್ತಿ ಗೌಡ, ಅರುಣ್‌ಗೌಡ, ಮೋಹನ್‌ಗೌಡ, ಪ್ರಸನ್ನ ಮತ್ತಿತರರು ಹಾಜರಿದ್ದರು.