ಮಕ್ಕಳ ಸಾಧನೆಗೆ ಪ್ರೋತ್ಸಾಹ ನೀಡಿ

29sgr1
ಸಾಗರದಲ್ಲಿ ಪ್ರಾಂತ್ಯ ಆರ್ಯ ಈಡಿಗರ ಸಂಘದಿAದ ಆಯೋಜಿಸಿದ್ದ ದತ್ತಿ ನಿಽ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಗೋಡು ತಿಮ್ಮಪ್ಪ, ಪಾಂಡುರAಗ, ಚಂದ್ರು, ರವಿಕುಮಾರ್, ಪರಮೇಶ್ವರ, ಮಂಜಪ್ಪ ಇತರರಿದ್ದರು.
Published on

ಸಾಗರ: ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಕರ್ತವ್ಯ ಎಂದು ಮಾಜಿ ಸಚಿವ ಹಾಗೂ ಪ್ರಾಂತ್ಯ ಆರ್ಯ ಈಡಿಗರ ಸಂಘದ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.

ನಗರದ ಈಡಿಗರ ಸಭಾಭವನದಲ್ಲಿ ಗುರುವಾರ ಪ್ರಾಂತ್ಯ ಆರ್ಯ ಈಡಿಗರ ಸಂಘದಿAದ ಹುಣಸೆಕಟ್ಟೆ ಎಚ್.ಚನ್ನಪ್ಪ ಬಂಗಾರಮ್ಮ, ವಸುಂಧರಾ ಟಿ.ವಿ.ಪಾಂಡುರAಗ ಸಾಗರ, ಸಾವಿತ್ರಿ ಪಿ.ಸೈದೂರು ಮತ್ತು ಉಷಾ ಕೆ.ಸಿ.ಶಿವಪ್ಪ ನಾಡಕಲಸಿ ಇವರ ದತ್ತಿ ನಿಽಯಿಂದ ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದರು.
ಈಡಿಗ ಸಮುದಾಯದ ಮಕ್ಕಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಸಂಘದ ಕೆಲಸ ಅನುಕರಣೀಯವಾದದ್ದು. ಅಭಿನಂದನೆ ಸ್ವೀಕರಿಸಿದ ಮಕ್ಕಳು ಶೈಕ್ಷಣಿಕವಾಗಿ ಇನ್ನಷ್ಟು ಸಾಧನೆ ಮಾಡಲು ಸಲಹೆ ನೀಡಿದರು.
ಉಪಾಧ್ಯಕ್ಷರಾದ ಟಿ.ವಿ.ಪಾಂಡುರAಗ, ಎಸ್.ಕೆ.ಚಂದ್ರು, ರವಿಕುಮಾರ್ ಬೇರಾಳ, ಕಾರ್ಯದರ್ಶಿ ಟಿ. ಪರಮೇಶ್ವರ, ಖಜಾಂಚಿ ಬಿ.ಎಂ.ಮAಜಪ್ಪ, ಸಹ ಕಾರ್ಯದರ್ಶಿ ಕರುಣಾಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net