

ಪಂಚನಹಳ್ಳಿ: ಕೇವಲ ಪಠ್ಯದಿಂದ ಮಾತ್ರವಲ್ಲ,ಕ್ರೀಡೆಯಿಂದಲೂ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ದಾನಿ ಉಮೇಶ್ ಹೇಳಿದರು.
ಕುಂಕನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಯಗಟಿ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಓದಿನಲ್ಲಿ ಹಿಂದೆ ಉಳಿದ ಅನೇಕರು ಕ್ರೀಡೆ, ಸಂಗೀತ ಮತ್ತಿತರ ರಂಗಗಳಲ್ಲಿ ತೊಡಗಿಸಿಕೊಂಡು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಆದ್ದರಿಂದ ಶಿಕ್ಷಕರು ಮತ್ತು ಪಾಲಕರು ಮಕ್ಕಳನ್ನು ಕೇವಲ ಓದುವಂತೆ ಒತ್ತಾಯಿಸುವ ಬದಲು ಅವರ ಅಭಿರುಚಿಗೆ ತಕ್ಕಂತೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಕ್ರೀಡಾಕೂಟ ಎಂದರೆ ಅಲ್ಲಿ ಪರಸ್ಪರ ಸ್ಪರ್ಧೆ, ಸೋಲು,ಗೆಲವು ಇರುತ್ತದೆ. ಹಾಗಾಗಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು.ತೀರ್ಪುಗಾರರು ನ್ಯಾಯಸಮ್ಮತವಾಗಿ ತೀರ್ಪು ನೀಡಿದರೆ ಯಾವುದೇ ಗೊಂದಲ ಉಂಟಾಗುವುದಿಲ್ಲ ಎಂದರು ತಿಳಿಸಿದರು.
ಕುಂಕನಾಡು ಗ್ರಾಪಂ ಅಧ್ಯಕ್ಷ ಕೆ.ಎಂ.ಹರೀಶ್ ಮಾತನಾಡಿ, ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಅವುಗಳು ಯಶಸ್ವಿಯಾಗಲು ದಾನಿಗಳು ಮತ್ತು ಸಾರ್ವಜನಿಕರ ಸಹಕಾರ ಅಗತ್ಯ. ಕುಂಕನಾಡು ಗ್ರಾಮದಲ್ಲಿ ಏರ್ಪಡಿಸಿರುವ ಕ್ರೀಡಾಕೂಟಕ್ಕೆ ದಾನಿ ಉಮೇಶ್ ಬಹುಮಾನದ ಪ್ರಾಯೋಜಕತ್ವ ವಹಿಸಿಕೊಳ್ಳುವ ಮೂಲಕ ಸಹಕಾರ ನೀಡಿದ್ದಾರೆ. ಐದು ಕ್ಲಸ್ಟರ್‌ಗಳ 27 ಶಾಲೆಗಳ ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಕುಮಾರಪ್ಪ , ಮುಖಂಡ ಚಿನ್ನು ದೇವರಾಜ್ ಇದ್ದರು.