

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಕಲಾವಿದರನ್ನು ಪೋಷಿಸುತ್ತ ಬಂದ ನಗರ. ತಮ್ಮ ಸಾಹಸದ ಕಲೆ ಮೂಲಕ ಜೀವನ ಸಾಗಿಸುತ್ತಿರುವ ಗುರು ರಾವೇಂದ್ರಸ್ವಾಮಿ ಸೈಕಲ್ ಸರ್ಕಸ್ ಕಲಾ ಮಂಡಳಿ ಕಲಾವಿದರ ಕಲೆ ಮತ್ತು ಅವರ ಸಾಹಸವನ್ನು ನೋಡಿ ಪ್ರೋತ್ಸಾಹಿಸಬೇಕು ಎಂದು ಕವಿವ ಸಂದ ಪ್ರಧಾನ ಕಾರ್ಯದಶಿರ್ ಶಂಕರ ಹಲಗತ್ತಿ ಹೇಳಿದರು.
ನಗರದ ಕಲಾಭವನ ಮೈದಾನದಲ್ಲಿ ಏರ್ಪಡಿಸಿರುವ ಸೈಕಲ್ ಸಾಹಸದ ಸರ್ಕಸ್ಗೆ ಇತ್ತೀಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಕಲಾವಿದರು ರಾಜ್ಯದಾದ್ಯಂತ ಸುತ್ತುತ್ತಾ, ಯುವಕರಲ್ಲಿ ಸಾಹಸದ ಕಲೆ ಕುರಿತು ಆಸಕ್ತಿ ಹುಟ್ಟಿಸುವಂತೆ ಮಾಡುತ್ತಿರುವುದು ಅಭಿನಂದನೀಯ ಎಂದರು.
ಡಾ. ಜಿನದತ್ತ ಹಡಗಲಿ ಮಾತನಾಡಿ, ಇಂದು ಮೊಬೈಲ್ ಮತ್ತು ಟಿವಿಗಳಲ್ಲಿ ಸಾಹಸದ ಕ್ರೀಡೆಗಳನ್ನು ಖುಷಿ ಪಡುತ್ತೇವೆ. ಆದರೆ ಇಂದು ನಮ್ಮ ಕಣ್ಣೆದುರಿಗೆನೇ ಸಾಹಸದ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು ಕಡಿಮೆಯಾಗುತ್ತಿದೆ. ಆದರೆ ಧಾರವಾಡದ ಜನತೆ ಇಂತಹ ಕಲಾವಿದರಿಗೆ ಮುಕ್ತವಾಗಿ ಪ್ರೋತ್ಸಾಹ ನೀಡುತ್ತಾ ಬಂದಿರುವುದು ಹೆಮ್ಮೆಯ ಸಂಗತಿ ಎಂದರು.
ಶಂಕರ ಕುಂಬಿ ಮಾತನಾಡಿದರು. ಶಿ.ಮ. ರಾಚಯ್ಯನವರ ಉಪಸ್ಥಿತರಿದ್ದರು.