

ಹುಬ್ಬಳ್ಳಿ: ರಾಜ್ಯದಲ್ಲಿ ಆಡಳಿತ ಪಕ್ಷವಾದ ಕಾಂಗ್ರೆಸ್‌ನ ಮಹಾನಗರ ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ ಅವರ ಪುತ್ರಿ ನೇಹಾ ಕೊಲೆ ಪ್ರಕರಣದಿಂದಾಗಿ ಎಲ್ಲೆಡೆ ಆಕ್ರೋಶ ಭುಗಿಲೆದ್ದಿದೆ. ಕೊಲೆಗಾರನನ್ನು ಎನ್ಕೌಂಟರ್ ಮಾಡಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.
ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿ ಇಲ್ಲದ ಕಾರಣಕ್ಕೆ ಕಾಲೇಜ್ ಕ್ಯಾಂಪಸ್ ಕೂಡ ಸುರತವಾಗಿ ಉಳಿದಿಲ್ಲ. ಕ್ಯಾಂಪಸ್ ಒಳಗೆ ಬಂದು ವಿದ್ಯಾಥಿರ್ನಿಯನ್ನು ಹತ್ಯೆ ಮಾಡುವಷ್ಟು ವಿಕೃತಿಯನ್ನು ದುಷ್ಕಮಿರ್ ಮೆರೆದಿದ್ದಾನೆ ಎಂದು ವಿದ್ಯಾಥಿರ್ ಸಮೂಹ ಆತಂಕದಿಂದ ಹೇಳುತ್ತಿದೆ.
ಕೊಲೆ ಘಟನೆಯ ನಂತರ ವಿದ್ಯಾಥಿರ್ ಸಂಟನೆಗಳು ಮಾತ್ರವಲ್ಲ, ದಲಿತ ಸಂಟನೆಗಳು ಸೇರಿ ಹಲವರು ಪ್ರತಿಭಟನೆ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಎಬಿವಿಪಿ, ದಲಿತ ವಿಮೋಚನಾ ಸಮಿತಿ ಸೇರಿ ವಿವಿಧ ಸಂಟನೆಯ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದರು. ಕೊಲೆಗಡುಕನನ್ನು ಗಲ್ಲಿಗೇರಿಸಬೇಕು ಇಲ್ಲವೇ ಎನ್ಕೌಂಟರ್ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರೀತಿ, ಪ್ರೇಮದ ಬಲೆ ಬೀಸಿ ಹಿಂದು ಯುವತಿಯರನ್ನು ಜಾಲಕ್ಕೆ ಸಿಲುಕಿಸುವ ಪ್ರಸಂಗಗಳು ಆಗಾಗ ನಡೆಯುತ್ತಿವೆ. ಅದರಂತೆ ನೇಹಾ ಪ್ರಕರಣವೂ ಲವ್ ಜಿಹಾದ್ನಂತೆ ಗೋಚರಿಸುತ್ತಿದೆ. ಹಾಗಾಗಿ ಸೂಕ್ತ ತನಿಖೆ ನಡೆಯಬೇಕು. ಇದಕ್ಕೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಸಚಿವ ಸಂತೋಷ್ ಲಾಡ್ ಅವರು ಕೂಡ ಇಂತಹ ಟನೆಗಳು ಮರುಕಳಿಸಬಾರದು ಎಂದರೆ ಎನ್ಕೌಂಟರ್ ಕಾನೂನು ಜಾರಿಗೆ ತರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರು ಕೊಲೆಗಾರನನ್ನು ಎನ್ಕೌಂಟರ್ ಮಾಡಬೇಕು, ಐಸಿಸ್ ಮಾದರಿಯಲ್ಲಿ ಚಾಕು ಹಾಕಿದ್ದಾನೆ. ಅತನ ಮನೆಯನ್ನು ಬುಲ್ಡೋಜರ್ನಿಂದ ನೆಲಸಮ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಾಸ್ ಮರ್ಡರ್ ಕಾಮನ್ ಆಗುತ್ತಿವೆ. ರಾಜ್ಯವು ಬಿಹಾರ ಆಗುತ್ತಿದೆ. ರೌಡಿಗಳಿಗೆ, ಗೂಂಡಾಗಳಿಗೆ ರಾಜ ಮರ್ಯಾದೆ ಸಿಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಪಾಲಿಕೆ ಸದಸ್ಯ ನಿರಂಜನಯ್ಯ ಅವರಿಗೆ ಧೈರ್ಯ ತುಂಬಿದ್ದಾರೆ. ದೃತಿಗೆಡಬೇಡಿ. ಕೊಲೆಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡೋಣ ಎಂದು ಸಾಂತ್ವನ ಹೇಳಿದ್ದಾರೆ.
ಸಂಸ್ಕಾರವಂತ ಕುಟುಂಬ:
ನಿತ್ಯ ಪೂಜೆ, ಆಚಾರ ವಿಚಾರದಲ್ಲಿ ಮುಂಚೂಣಿಯಲ್ಲಿದ್ದ ಹಿರೇಮಠ ಅವರದು ಸಂಸ್ಕಾರವಂತ ಕುಟುಂಬ. ನೇಹಾ ಕೂಡ ನಿತ್ಯ ಶಿವಪೂಜೆ ಮಾಡದೇ ನೀರು ಕೂಡ ಸೇವಿಸುತ್ತಿರಲಿಲ್ಲ. ಅಂತಹ ಹೆಣ್ಣು ಮಗಳು ಪ್ರೀತಿ, ಪ್ರೇಮದ ಸಹವಾಸಕ್ಕೆ ಹೋಗಿರಲಿಲ್ಲ ಎಂದು ಕುಟುಂಬದವರು ಹೇಳುತ್ತಿದ್ದಾರೆ.
ಅಂತ್ಯ ಸಂಸ್ಕಾರ:
ಗುರುವಾರ ಕೊಲೆಯಾಗಿದ್ದ ನೇಹಾ ಹಿರೇಮಠ ಅಂತ್ಯ ಸಂಸ್ಕಾರ ಶುಕ್ರವಾರ ಹುಬ್ಬಳ್ಳಿಯ ಕಲಬುಗಿರ್ ಮಠ ಬಳಿಯ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು. ಬಿಡನಾಳದ ಬಸವನಗರದಲ್ಲಿರುವ ಮನೆಯಿಂದ ನೇಹಾಳ ಅಂತಿಮಯಾತ್ರೆ ಹೊರಟಿತು. ಅಮಾಯಕ ಯುವತಿ ವಿಕೃತಿಗೆ ಬಲಿಪಶುವಾದದ್ದನ್ನು ನೆನೆದು ಸೇರಿದ್ದ ಸಾವಿರಾರು ಜನರು ಕಣ್ಣೀರಾದರು.
ಗೃಹ ಸಚಿವರ ಕ್ಷಮೆಗೆ ಆಗ್ರಹ:
ಪ್ರೀತಿ ತಿರಸ್ಕರಿಸಿದಳೆಂದು ವಿಕೃತಿ ಪ್ರದಶಿರ್ಸಿ ಕೊಲೆ ಮಾಡಿದ ಟನೆಯನ್ನು ಆಕಸ್ಮಿಕ ಎಂದು ಹೇಳಿದ ಗೃಹ ಸಚಿವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಗೃಹ ಸಚಿವರು ನೀಡಿದ ಹೇಳಿಕೆ ಖಂಡನೀಯ. ಅವರು ಕೂಡಲೇ ಕ್ಷಮೆಯಾಚಿಸಬೇಕೆಂದು ಹಿಂದುಪರ ಸಂಘಟನೆ ಮತ್ತು ಬಿಜೆಪಿ ಕಾರ್ಯಕರ್ತರು ನೇಹಾ ಪಾರ್ಥೀವ ಶರೀರವನ್ನು ರಸ್ತೆಯಲ್ಲಿ ಇಟ್ಟುಕೊಂಡು ಕೆಲಕಾಲ ಪ್ರತಿಭಟನೆ ನಡೆಸಿದರು. ಇಲ್ಲಿನ ವೀರಾಪುರ ರಸ್ತೆ ಎರಡೆತ್ತಿನಮಠ ಎದುರು ನೇಹಾ ಪ್ರಾಥಿರ್ವ ಶರೀರ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು.