ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಶಕ್ತಿ ಬಲವರ್ಧನೆ

Empowerment of women through guarantee schemes
ಆಲಮೇಲದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಅಶೋಕ ಮನಗೂಳಿ, ಇಲಿಯಾಸ ಬೋರಾಮಣಿ, ಅಶೋಕಗೌಡ ಕೊಳಾರಿ, ಬಸವರಾಜ ತೆಲ್ಲೂರ, ಪ್ರಭು ವಾಲಿಕಾರ, ಬಸವರಾಜ ತಾವರಗೇರಿ, ಮುತ್ತುರಾಜ ಕತ್ತಿ, ಶರಣಪ್ಪ ನಾಟೀಕಾರ ಇತರರಿದ್ದರು.
Published on

ಆಲಮೇಲ: ರಾಜ್ಯದ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ತಲುಪುತ್ತಿವೆ. ಮಹಿಳಾ ಶಕ್ತಿ ಬಲವರ್ಧನೆಗಾಗಿ ಸಹಕಾರಿಯಾಗಿವೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಇಲಿಯಾಸ ಬೋರಾಮಣಿ ಹೇಳಿದರು.

ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಗುರುವಾರ ಅವರು ಮಾತನಾಡಿದರು.

ಎಲ್ಲ ವರ್ಗದ ತಾಯಂದಿರು ಶಕ್ತಿಯೋಜನೆಯ ಲಾಭ ಪಡೆಯುವ ಮೂಲಕ ಸಾರಿಗೆ ಸಂಸ್ಥೆಗೆ ಆದಾಯ ನೀಡುತ್ತಿದ್ದಾರೆ ಎಂದರು.

ಕಚೇರಿ ಉದ್ಘಾಟಿಸಿದ ಶಾಸಕ ಅಶೋಕ ಮನಗೂಳಿ ಮಾತನಾಡಿ, ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳು ಜನರಿಗೆ ತಲುಪಿವೆ. ಅದರಿಂದ ಆರ್ಥಿಕಶಕ್ತಿ ವೃದ್ಧಿಸಿದೆ ಎಂದರು.

ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಅಶೋಕಗೌಡ ಕೊಳಾರಿ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಕೆ.ವಿಜಯಕುಮಾರ, ತಾ.ಪಂ.ಅಧಿಕಾರಿ ರೀದಾ ಪಠಾಣ, ಪ.ಪಂ.ಅಧ್ಯಕ್ಷ ಸಾಧೀಕ ಸುಂಬಡ, ಎಪಿಎಂಸಿ ಅಧ್ಯಕ್ಷ ಬಸವರಾಜ ಬಾಗೇವಾಡಿ, ನಾಗರಿಕ ವೇದಿಕೆ ಅಧ್ಯಕ್ಷ ರಮೇಶ ಬಂಟನೂರ, ಮುಖಂಡರಾದ ಬಸವರಾಜ ತೆಲ್ಲೂರ, ಪ್ರಭು ವಾಲಿಕಾರ, ಬಸವರಾಜ ತಾವರಗೇರಿ, ಕಡಣಿ ಗ್ರಾಪಂ ಅಧ್ಯಕ್ಷ ಮುತ್ತುರಾಜ ಕತ್ತಿ, ಶರಣಪ್ಪ ನಾಟೀಕಾರ, ಶಿವಾನಂದ ಜಗತಿ, ವಹಾಬ್ ಸುಂಬಡ, ಶಶಿಧರ ಗಣಿಹಾರ ಉಪಸ್ಥಿತರಿದ್ದರು.

ಶ್ರೀಶೈಲ ಮಠಪತಿ ಸ್ವಾಗತಿಸಿದರು. ರಮೇಶ ಬಂಟನೂರ ವಂದಿಸಿದರು. ಶಿವಶರಣ ಗುಂದಗಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net