ಸಮಾನತೆಯಿಂದ ಮಹಿಳೆಯರ ಸಬಲೀಕರಣ

26 TKE 2,2,2
Published on

ತರೀಕೆರೆ: ಸಮಾನತೆಯಿಂದಲೇ ಮಹಿಳೆಯರ ಸಬಲೀಕರಣ ಸಾಧ್ಯ ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಉಪಾಧ್ಯಕ್ಷೆ ಗೌರಿ ಪ್ರಸನ್ನ ಹೇಳಿದರು.

ಕುಡ್ಲೂರು ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿ ಆಯೋಜಿಸಿದ್ದ ಮಹಿಳಾ ವಿಚಾರಗೋಷ್ಟಿ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಮೌಢ್ಯತೆಯಿಂದ ಹೊರ ಬರಬೇಕು. ಸ್ವಾವಲಂಬಿಗಳಾಗಿ ಆರ್ಥಿಕ ಪ್ರಗತಿ ಸಾಧಿಸುವ ಮೂಲಕ ಕುಟುಂಬಕ್ಕೆ ಆಧಾರವಾಗಿ ನಿಲ್ಲಬೇಕು. ಸಂಘಟನೆಗೆ ಸಂಕಷ್ಟ ಎದುರಿಸುವ ಸಾಮರ್ಥ್ಯವಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸದಸ್ಯತ್ವ ಪಡೆದ ಮಹಿಳೆಯರು ಎಲ್ಲವನ್ನು ಎದುರಿಸುವ ಶಕ್ತಿ ಜತೆಗೆ ಜೀವನದ ಪಾಠ ಕಲಿತು ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಬೀರೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ನಾಗರಾಜ್ ಮಾತನಾಡಿ, ಮಹಿಳೆಯರ ಕಲ್ಯಾಣವಾದರೆ, ಕುಟುಂಬ ನಿರ್ವಹಣೆ ಸುಲಭ. ಸಮಾಜದಲ್ಲಿ ಎದುರಾಗುವ ಅಡ್ಡಿ ಆತಂಕಗಳನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಮೈಗೂಡಿಸಿಕೊಳ್ಳಬೇಕು. ಜ್ಞಾನದ ಮೂಲಕ ಕಾನೂನು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಮಾತನಾಡಿ, ಸಂಘದಲ್ಲಿ ಸಕ್ರಿಯರಾಗಿರುವ ಮಹಿಳೆಯರು ಯೋಜನೆ ಮೂಲಕ ಪಡೆಯುವ ಸಾಲ ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳಬೇಕು. ನಿಗದಿತ ಸಮಯದಲ್ಲಿ ಸಾಲ ಮರುಪಾವತಿಸಿ ಶಿಸ್ತುಬದ್ಧ ಜೀವನ ಕಟ್ಟಿಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net