ಹೈನುಗಾರಿಕೆಯಿಂದ ಮಹಿಳೆಯರ ಸಬಲೀಕರಣ

2
ಹನಗೋಡು ಹೋಬಳಿಯ ಬೆಕ್ಯಶೆಡ್ ಗ್ರಾಮದ ನೂತನ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಶಾಸಕ ಜಿ.ಡಿ.ಹರೀಶ್‌ಗೌಡ ಉದ್ಘಾಟಿಸಿದರು. ಕೆ.ಎಸ್.ಕುಮಾರ್, ಶಿವಗಾಮಿ, ಸುಭಾಷ್, ಮಹೇಶ್ ಇದ್ದರು.
Published on

ಹನಗೋಡು: ಹೈನುಗಾರಿಕೆಯಿಂದ ಮಹಿಳೆಯರು ಆರ್ಥಿಕ ಸದೃಢರಾಗಿದ್ದಾರೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಅಭಿಪ್ರಾಯಪಟ್ಟರು.

ಹೋಬಳಿಯ ಬೆಕ್ಯಶೆಡ್ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿ, ಹುಣಸೂರು ತಾಲೂಕಿಗೆ ತನ್ನದೇ ಆದ ಇತಿಹಾಸವಿದೆ. ಮೈಸೂರು ಜಿಲ್ಲೆಯ ಹಾಲು ಉತ್ಪಾದನೆಯಲ್ಲಿ ಹುಣಸೂರು ತಾಲೂಕು ಹಾಲು ಉತ್ಪಾದಕರ ಒಕ್ಕೂಟವು ಮೊದಲಿನ ಸಾಲಿನಲ್ಲಿದೆ. ಹಾಲಿನ ಗುಣಮಟ್ಟ ಪಾರದರ್ಶಕತೆಯನ್ನು ಒಕ್ಕೂಟ ಕಾಪಾಡಿಕೊಂಡಿದೆ ಎಂದು ತಿಳಿಸಿದರು.

ಹಾಲು ಒಕ್ಕೂಟದಿಂದ ಹೈನುಗಾರಿಕೆಗೆ ಸಹಾಯಧನ, ವೈದ್ಯಕೀಯ ವಿಮಾ ಸೌಲಭ್ಯ ಸೇರಿದಂತೆ ನೀಡುತ್ತಿರುವ ಎಲ್ಲ ರೀತಿಯ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಸಂಘದಲ್ಲಿ ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಢಿದರು.

ಕೆಎಂಎಫ್ ನಿರ್ದೇಶಕ ಕೆ ಎಸ್.ಕುಮಾರ್ ಮಾತನಾಡಿದರು. ಸಮಾರಂಭದಲ್ಲಿ ಮೈಮುಲ್ ನಿರ್ದೇಶಕಿ ಶಿವಗಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಸುಭಾಷ್, ಗ್ರಾಪಂ ಮಾಜಿ ಅಧ್ಯಕ್ಷ ದಾ.ರಾ.ಮಹೇಶ್, ಗುತ್ತಿಗೆದಾರ ಗವಿಮಾದು, ಮುಖಂಡರಾದ ಶ್ರೀನಿವಾಸ್, ಪುಟ್ಟೇಗೌಡ, ಪ್ರತಾಪ್, ವೃಷಬೇಂದ್ರ, ಮಂಜು, ಮಹದೇವ್, ಕೃಷ್ಣೇಗೌಡ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net