ದೀನ-ದಲಿತರನ್ನು ಆರ್ಥಿಕ ಸಬಲರನ್ನಾಗಿಸಿ

24 Jaggu 11-Web
ಸುಭಾಷ್‌ಚಂದ್ರ ಬೋಸ್ ಜಯಂತಿಯನ್ನು ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಉದ್ಘಾಟಿಸಿದರು. ಶಾಸಕ ಅಭಯ ಪಾಟೀಲ, ಸೊಸೈಟಿ ಅಧ್ಯಕ್ಷ ಮಾರುತಿ ಝಿರಲಿ ಇದ್ದರು.
Published on

ಬೆಳಗಾವಿ: ನೇತಾಜಿ ಸುಭಾಷ್‌ಚಂದ್ರ ಬೋಸ್ ಕೋ-ಆಪ್ ಕ್ರೆಡಿಟ್ ಸೊಸೈಟಿ ವತಿಯಿಂದ ಭೋಸ್ ಅವರ 125ನೇ ಜಯಂತಿ ಹಾಗೂ ಕಚೇರಿ ಉದ್ಘಾಟನಾ ಸಮಾರಂಭ ಕಣಬರ್ಗಿ ರಸ್ತೆಯ ರಾಮತೀರ್ಥ ನಗರದ ಕೇಂದ್ರ ಕಚೇರಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು. ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜಕ್ಕೆ ಭದ್ರತೆ ಮತ್ತು ದೀನ ದಲಿತರ ಬೆವರಿನ ಸಂಪಾದನೆಯನ್ನು ಬ್ಯಾಂಕ್ ಮೂಲಕ ರಕ್ಷಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕ ಅಭಯ ಪಾಟೀಲ ನೇತಾಜಿ ಮೂರ್ತಿ ಅನಾವರಣಗೊಳಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಾರುತಿ ಝಿರಲಿ ಮಾತನಾಡಿ, ಶ್ರಮಿಕ ವರ್ಗಕ್ಕೆ ಭದ್ರತೆ ಒದಗಿಸುವ ದೃಷ್ಟಿಯಿಂದ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂದು ಸಂಸ್ಥೆ ಬೆಳೆದು ಬಂದು ಹಾದಿ ವಿವರಿಸಿದರು. ಸೊಸೈಟಿಯಲ್ಲಿ ನೂತನ ‘ಸ್ಟ್ರಾಂಗ್ ರೂಂ’ ಉದ್ಘಾಟಿಸಲಾಯಿತು. ಪಂಚಾಕ್ಷರಿ ಹಿರೇಮಠ, ಪ್ರಭಾ ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net