ಉದ್ಯೋಗ ಕೌಶಲ ಜೀವನಕ್ಕೆ ಅಡಿಪಾಯ

mkg1c
Published on

ಚನ್ನಗಿರಿ: ಪದವಿ ವ್ಯಾಸಂಗ ಮಾಡುವಂತಹ ವಿದ್ಯಾರ್ಥಿಗಳ ಜೀವನಕ್ಕೆ ಉದ್ಯೋಗ ಕೌಶಲ ಅಡಿಪಾಯವಾಗಿದ್ದು, ಅವರಿಗೆ ಸಮಯೋಜಿತವಾಗಿ ಕಲಿಕಾ ಜ್ಞಾನ ಉತ್ತೇಜಿಸಲು ಕಾರ್ಯಾಗಾರಗಳು ಪರಿಣಾಮಕಾರಿಯಾಗಿದೆ ಎಂದು ಉದ್ಯೋಗ ಕೌಶಲ ಸಂಯೊಜಕ ಡಾ.ರಾಜಶೇಖರ್ ತಿಳಿಸಿದರು.

ತಾಲೂಕಿನ ಸಂತೇಬೆನ್ನೂರು ಸರ್ಕಾರಿ ಪದವಿ ಕಾಲೇಜಿನಲ್ಲಿ ಆರು ದಿನಗಳ ಕಾಲ ಮಹೀಂದ್ರ ಪ್ರೈಡ್ ಸಹಯೋಗದ ನಾಂದಿ ಪೌಂಡೇಶನ್ ವತಿಯಿಂದ ಪದವಿ ವಿದ್ಯಾರ್ಥಿನಿಯರಿಗೆ ಹಮ್ಮಿಕೊಂಡಿದ್ದ ಉದ್ಯೋಗ ಕೌಶಲ ಕಾರ್ಯಾಗಾರದ ಸಮಾರೋಪದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಕಾರ್ಯಾಗಾರದಲ್ಲಿ ಒತ್ತಡ ನಿವಾರಣೆ, ಸಂದರ್ಶನ ಮಾರ್ಗಸೂಚಿ, ಏಕಾಗ್ರತೆ, ನಿರೂಪಣೆ ಕಲೆ, ಭಾಷಾ ಕೌಶಲ, ಆತ್ಮವಿಶ್ವಾಸ ವೃದ್ಧ್ದಿ, ಕಂಪ್ಯೂಟರ್ ನಿರ್ವಹಣೆ ಬಗ್ಗೆ ತರಬೇತಿ ನೀಡಲಾಗಿದೆ ಎಂದರು.

ಕಾಲೇಜಿನ ಪ್ರಾಚಾರ್ಯ ಗಿರಿಸ್ವಾಮಿ ಮಾತನಾಡಿ, ಇಂದಿನ ಜೀವನದಲ್ಲಿ ಪ್ರತಿಯೊಬ್ಬರಿಗೂ ಭಾಷಾ ಕೌಶಲ ಅವಶ್ಯಕ. ಉತ್ತಮ ಸಂವಹನ ಕಲೆ ಇದ್ದವರಿಗೆ ಯಶಸ್ಸು ಖಚಿತ ಎಂದರು.

ಸಂಪನ್ಮೂಲ ವ್ಯಕ್ತಿ ಸುಧೀರ್, ಪವಿತ್ರಾ, ಉಪಸಂಯೋಜಕಿ ನಾಗರತ್ನ್ನಾ, ಮಲ್ಲಯ್ಯ, ಚಂದ್ರಪ್ಪ, ಮೃತ್ಯುಂಜಯ, ಡಾ. ಸುರೇಶ್, ಪುನೀತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net