ಹಳ್ಳಿಗರಿಗೆ ಉದ್ಯೋಗ ಕೊಡುವ ಉದ್ದೇಶ: ಕ್ಯಾಸಿನಕೆರೆಯಲ್ಲಿ ದುಡಿಯೋಣ ಬಾ ಅಭಿಯಾನಕ್ಕೆ ಚಾಲನೆ

HNL NAREGA MAR 16
Published on

ಹೊನ್ನಾಳಿ: ಬೇಸಿಗೆಯಲ್ಲಿ ಜನರಿಗೆ ನಿರಂತರ ಕೆಲಸ, ಸ್ವಾವಲಂಬಿ ಬದುಕು ನಿರ್ಮಿಸಲು ದುಡಿಯೋಣ ಬಾ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಪಂಚಾಯಿತಿ ಇಒ ಗಂಗಾಧರಮೂರ್ತಿ ಹೇಳಿದರು.

ತಾಲೂಕಿನ ಕ್ಯಾಸಿನಕೆರೆ ಗ್ರಾಮದಲ್ಲಿ ಮಂಗಳವಾರ ಸಂಜೀವಿನಿ ಬೆಳಕು ಮಹಿಳಾ ಒಕ್ಕೂಟ ಆಯೋಜಿಸಿದ್ದ ದುಡಿಯೋಣ ಬಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಬೇಸಿಗೆ ಕಾಲದಲ್ಲಿ ರೈತಾಪಿ ವರ್ಗಕ್ಕೆ ಕೃಷಿ ಚಟುವಟಿಕೆ ಕಡಿಮೆ ಇರುತ್ತದೆ. ಅದರಂತೆ ಗ್ರಾಮೀಣರಿಗೆ ನಿರಂತರ ಉದ್ಯೋಗ ಒದಗಿಸುವ ಉದ್ದೇಶದಿಂದ ನರೇಗಾ ಯೋಜನೆಯಡಿ ಮಾ. 15 ರಿಂದ 3 ತಿಂಗಳವರೆಗೆ ಅಭಿಯಾನ ಕೈಗೊಳ್ಳಲಾಗಿದೆ. ಈ ಯೋಜನೆಯಿಂದ ಹೊರಗುಳಿದ ದುರ್ಬಲ ಕುಟುಂಬಗಳನ್ನು ಸಕ್ರಿಯಗೊಳಿಸಲಾಗುತ್ತಿದೆ ಎಂದರು.

ತಾಪಂ ಸಹಾಯಕ ನಿರ್ದೇಶಕ ರಾಘವೇಂದ್ರ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆದ್ಯತೆ ಮೇರೆಗೆ ನರೇಗಾ ಅಡಿ ಹಲವಾರು ಕೆಲಸ ನೀಡುತ್ತಿದೆ. ಕೂಲಿಕಾರರು ಸಕ್ರಿಯವಾಗಿ ಭಾಗಿಯಾದರೆ ಯೋಜನೆ ಸಾರ್ಥಕವಾಗಲಿದೆ ಎಂದರು.

ಗ್ರಾಪಂ ಉಪಾಧ್ಯಕ್ಷೆ ಸುಜಾತಮ್ಮ, ಸದಸ್ಯ ಮಂಜುನಾಥ್, ಮಹಿಳಾ ಒಕ್ಕೂಟದ ಅಧ್ಯಕ್ಷೆ ಮಂಜಮ್ಮ, ಕಾರ್ಯದರ್ಶಿ ರಾಜಪ್ಪ, ಎನ್‌ಆರ್‌ಎಲ್‌ಎಂ ಸಂಯೋಜಕ ರಾಘವೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net