

ಕುಶಾಲನಗರ: ಕೂಡಿಗೆ ಗ್ರಾಮ ಪಂಚಾಯತಿಯ ೨೦೨೩-೨೪ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮತ್ತು ೧೫ನೇ ಹಣಕಾಸು ಯೋಜನೆಯಡಿಯಲ್ಲಿ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆ ಮಂಗಳವಾರ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ತಾಲೂಕು ಯೋಜನಾಧಿಕಾರಿ ಎ.ಬಿ.ನವೀನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿದ್ದ ಗ್ರಾಮ ಪ್ರಮುಖರಾದ ಸುನಿಲ್ ರಾವ್, ರಾಜು ಮಂಜುನಾಥ, ಮಾದಪ್ಪ, ಬಾಪು ಸೇರಿದ ಹಾಗೆ ಹಲವಾರು ರೈತರು ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಬೆಳೆಯುವ ವಿವಿಧ ಸಸಿ ಗಳನ್ನು ಗ್ರಾಮ ಪಂಚಾಯತಿಯಿಂದ ಕ್ರಮಬದ್ಧ ರೀತಿಯಲ್ಲಿ ವಿತರಣೆ ಮಾಡುವಂತೆ ಹೇಳಿದರು.
ಸಭೆಯಲ್ಲಿ ಉದ್ಯೋಗ ಖಾತರಿ ಯೋಜನೆಯ ತಾಲೂಕು ಸಂಯೋಜಕ ವಿ.ಡಿ.ದಿನೇಶ್ ಉದ್ಯೋಗ ಖಾತರಿ, ಮತ್ತು ೧೫ನೇ ಹಣಕಾಸು ಯೋಜನೆಗೆ ಸಂಬಂಧಿಸಿದ ಮಾಹಿತಿಯನ್ನು ಸಭೆಗೆ ತಿಳಿಸಿದರು. ಕಾಮಗಾರಿ ಬಗ್ಗೆ ಗ್ರಾಮಸ್ಥರಿಂದ ಚರ್ಚೆಗಳು ನಡೆದವು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ ಕೆ.ಟಿ.ಗರೀಶ್ ಕುಮಾರ್, ಸದಸ್ಯರಾದ ಅನಂತ, ಅರುಣ್ ರಾವ್, ಚಂದ್ರು, ಶಿವಕುಮಾರ್, ಎಚ್.ಎಸ್.ರವಿ,ಸೇರಿದಂತೆ ಅಭಿವೃದ್ಧಿ ಅಧಿಕಾರಿ ಮಂಜಳಾ, ಕಾರ್ಯದರ್ಶಿ ಪುನೀತ್ ಸೇರಿದಂತೆ ಗ್ರಾಮಸ್ಥರು ಇದ್ದರು.