ನೂರಾರು ಜನರಿಗೆ ಉದ್ಯೋಗ

Job
Published on

ಮೈಸೂರು: ಎಚ್.ವಿ.ರಾಜೀವ್ ಸ್ನೇಹ ಬಳಗದ ವತಿಯಿಂದ ಕುವೆಂಪುನಗರದ ಪ್ರಮತಿ ಹಿಲ್‌ವ್ಯೆ ಅಕಾಡೆಮಿ ಶಾಲೆಯಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ ನೂರಾರು ನಿರುದ್ಯೋಗಿಗಳು ಸ್ಥಳದಲ್ಲಿಯೇ ಉದ್ಯೋಗಾವಕಾಶ ಪಡೆದುಕೊಂಡಿದ್ದಾರೆ.


ಆನ್‌ಲೈನ್ ಮೂಲಕ ಮತ್ತು ನೇರ ಸಂದರ್ಶನ ಮಾದರಿಯಲ್ಲಿ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ 900ಕ್ಕೂ ಹೆಚ್ಚು ಮಂದಿಗೆ ಉದ್ಯೋಗದ ನೇಮಕಾತಿ ಪತ್ರ ನೀಡಲಾಯಿತು. 2000ಕ್ಕೂ ಹೆಚ್ಚು ಜನ ಆನ್‌ಲೈನ್ ಮತ್ತು ನೇರ ಸಂದರ್ಶನದ ಮೂಲಕ ಮೇಳದಲ್ಲಿ ಭಾಗವಹಿಸಿದ್ದರು. ಈ ಮೇಳದಲ್ಲಿ 10ನೇ ತರಗತಿ, ದ್ವಿತೀಯ ಪಿಯುಸಿ, ಜೆಒಸಿ, ಡಿಪ್ಲೊಮಾ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಯಿತು.

ಇದರೊಂದಿಗೆ ಉದ್ಯೋಗ ಮೇಳದ ಮಾಹಿತಿ ತಿಳಿದಿದ್ದ ಕೆಲವರು 5 ದಿನಗಳ ಮುಂಚಿತವಾಗಿ ಆನ್‌ಲೈನ್ ಮೂಲಕ ಕಂಪನಿಗಳಿಗೆ ಸ್ವ-ವಿವರ ಮತ್ತು ಉದ್ಯೋಗದಲ್ಲಿನ ಆಸಕ್ತಿಗಳನ್ನು ಸಲ್ಲಿಸಿದ್ದರು. ಕ್ರಿಯನೆಸ್ಟ್, ವೆಲ್ತ್ ಪ್ರೈವೇಟ್ ಲಿಮಿಟೆಡ್, ಸರ್ವೀಸ್ ಜಂಕ್ಷನ್, ಕೆರಿಯರ್ ಲ್ಯಾಬ್ಸ್, ಎಡಿಎಂಎಸ್ ಇ-ಬೈಕ್ ಮಾರ್ಕೆಟಿಂಗ್, ಮುತ್ತೂಟ್ ಫೈನಾನ್ಸ್, ಐಟಿ ಟೆಕ್ನಾಲಜೀಸ್ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದವು. ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net