

ಭಟ್ಕಳ: ಮುರ್ಡೆಶ್ವರದ ಬೀನಾ ವೈದ್ಯ ಪದವಿ ಕಾಲೇಜಿನಲ್ಲಿ ಯೋಜನಾ ಉದ್ಯೋಗ ವಿನಿಮಯ ಇಲಾಖೆ ಸಹಯೋಗದೊಂದಿಗೆ ಉದ್ಯೋಗ ಕಾರ್ಡ್ ಡ್ರೈವ್ ಕಾರ್ಯಕ್ರಮ ನಡೆಯಿತು.
ಬೀನಾ ವೈದ್ಯ ಪದವಿ ಕಾಲೇಜ್ ಪ್ರಾಂಶುಪಾಲ ಡಾ. ರತೀಶ ಮಡಿವಾಳ ಮಾತನಾಡಿ, ನಮ್ಮ ಸಂಸ್ಥೆಯು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯ ಜತೆಗೆ ಅವರ ಬದುಕು ಕಟ್ಟಿಕೊಡಲು ಪೂರಕ ವಾತಾವರಣ ನಿರ್ವಿುಸುತ್ತಿದ್ದು, ನಮ್ಮ ವಿದ್ಯಾರ್ಥಿಗಳು ಬ್ಯಾಂಕಿಂಗ್ ಕ್ಷೇತ್ರದ ಜತೆಗೆ ಇನ್ಪೋಸಿಸ್ ಸಂಸ್ಥೆಯಂತಹ ಬಹುರಾಷ್ಟಿ›ೕಯ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಭಟ್ಕಳ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರಾಜು ನಾಯ್ಕ ಮಾತನಾಡಿ, ಯುವನಿಧಿ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಉದ್ಯೋಗಾಧಿಕಾರಿ ವಿನೋದ ನಾಯ್ಕ ಅವರು ಉದ್ಯೋಗ ಕಾರ್ಡ್ನ ಲಾಭಗಳ ಕುರಿತು ವಿವರಿಸಿದರು.
ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಟ್ರಸ್ಟಿ, ನಿರ್ದೇಶಕಿ ಡಾ. ಪುಷ್ಪಲತಾ ವೈದ್ಯ, ವಿದ್ಯಾರ್ಥಿಗಳಿಗೆ ಹಾಗೂ ನಿರುದ್ಯೋಗ ಯುವಕರಿಗೆ ಉದ್ಯೋಗ ಕಾರ್ಡ್ ನೋಂದಣಿಯನ್ನು ಉಚಿತವಾಗಿ ಮಾಡಿಸಿಕೊಡುವಲ್ಲಿ ಸಹಕರಿಸಿದರು.