

ರಾಯಚೂರು ಮಾ.೦೪ ಮತ್ತು ೦೫ ರಂದು ರಾಜ್ಯ ಸರ್ಕಾರಿ ನೌಕರರ ಸಂಘದಿAದ ಜಿಲ್ಲಾ ನೌಕರರ ಕ್ರೀಡಾಕೂಟವನ್ನು ನಗರದ ಮಹಾತ್ಮಗಾಂಽ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ಶಾವಂತಗೇರಾ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೨೦೨೪-೨೫ ಸಾಲಿನ ಕ್ರೀಡಾಕೂಟಗಳನ್ನು ಜಿಲ್ಲಾಡಳಿತ ಸಹಯೋಗದೊಂದಿಗೆ ನಡೆಸಲು ಉದ್ದೇಶಿಸಲಾಗಿದ್ದು, ಮಾ.೩ ವರೆಗೆ ಕ್ರೀಡೆಗಳಲ್ಲಿ ಭಾಗವಹಿಸುವ ನೌಕರರು ಆನ್‌ಲೈನ್ ನೊಂದಣಿ ಮಾಡಿಕೊಳ್ಳಬೇಕಿದೆ. ಈಗಾಗಲೇ ೭೭೦ ನೌಕರರು ನೊಂದಣಿ ಮಾಡಿಕೊಂಡಿದ್ದಾರೆ. ಕ್ರೀಡೆಗಳಲ್ಲಿ ಭಾಗವಹಿಸುವ ನೌಕರರು ಇಲಾಖೆ ಮುಖ್ಯಸ್ಥರ ಸಹಿಯೊಂದಿಗೆ ಗುರುತೀನ ಚೀಟಿಯೊಂದಿಗೆ ಭಾಗವಹಿಸಬೇಕು. ಖಾಯಂ ನೌಕರರಿಗೆ ಮಾತ್ರ ಅವಕಾಶವಿದೆ.
ಒಬ್ಬ ನೌಕರ ಮೂರು ಕ್ರೀಡೆಗಳಲ್ಲಿ ಮಾತ್ರ ಭಾಗವಹಿಸುವ ಅವಕಾಶವಿದೆ. ಕ್ರಿಕೆಟ್ ಪಂದ್ಯ ಕೃಷಿ ವಿಶ್ವವಿದ್ಯಾಲಯದ ಮೈದಾನದಲ್ಲಿ ನಡೆಯಲಿದ್ದು ಉಳಿದ ಕ್ರೀಡೆಗಳು ಮಹಾತ್ಮಗಾಂಽ ಹೊರಾಂಗಣ ಮತ್ತು ಒಳಾಂಗಣ ಮೈದಾನದಲ್ಲಿ ನಡೆಯಿವೆ. ಸರ್ಕಾರಿ ನೌಕರರ ಒತ್ತಡದ ಮಧ್ಯೆ ಕ್ರೀಡೆಗಳಲ್ಲಿ ಭಾಗವಹಿಸುವಮೂಲಕ ಆತ್ಮಸೈರ್ಯ ಹೆಚ್ಚಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಡಾ.ಶಂಕರಗೌಡ ಪಾಟೀಲ್, ಹನುಮಂತ್ರಾಯ ಶಾಖೆ, ಹಸನ್ ಉಲ್ ಹಕ್, ಪ್ರಸನ್ನಕುಮಾರ, ವಿರೇಶ ನಾಯಕ, ರಂಗಸ್ವಾಮಿ, ವೆಂಕಪ್ಪ ಫಿರಂಗಿ ಇದ್ದರು.