ವಜಾಗೊಳಿಸಿದ್ದಕ್ಕೆ ನೌಕರರ ಪ್ರತಿಭಟನೆ

Untitled-3
ಟಿ.ಬೇಗೂರು ಬಳಿಯ ಖಾಸಗಿ ಕಂಪನಿ ಮುಂಭಾಗದಲ್ಲಿ ಕಾಯಂ ನೌಕರರು ಪ್ರತಿಭಟನೆ ನಡೆಸಿದರು. ಪರಮೇಶ್ವರಯ್ಯ, ಹನುಮಂತರಾಯಪ್ಪ, ಆನಂದ್​ಕುಮಾರ್​, ದಿನೇಶಕುಮಾರ್​, ಪ್ರಶಾಂತ್​, ಪ್ರಸನ್ನ, ಲ್ಮ, ಕೃಷ್ಣಮೂರ್ತಿ, ಶ್ರೀನಿವಾಸಲು ಮತ್ತಿತರರಿದ್ದರು.
Published on

ನೆಲಮಂಗಲ : ಕಂಪನಿಯ ಕಾಯಂ ನೌಕರರನ್ನು ಕೆಲಸದಿಂದ ವಜಾಗೊಳಿಸಿರುವುದನ್ನು ಖಂಡಿಸಿ ನೌಕರರು ತಾಲೂಕಿನ ಟಿ.ಬೇಗೂರು ಬಳಿಯ ಖಾಸಗಿ ಕಂಪನಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದರು. ಕಳೆದ 30 ವರ್ಷದಿಂದ ಕಂಪನಿಯಲ್ಲಿ ಸೇವೆ ಮಾಡಿದ್ದು, ಏಕಾಏಕಿ ಕೆಲಸದಿಂದ ವಜಾಗೊಳಿಸಿದ್ದಾರೆ, ನೌಕರರಿಗೆ ಕಾನೂನು ಬದ್ಧವಾಗಿ ವೇತನ ಹಾಗೂ ಅವರಿಗೆ ದೊರೆಯುವ ಸೌಲಭ್ಯಗಳನ್ನು ನೀಡಬೇಕು ಎಂದು ನೌಕರ ಪಣ್ಮುಖಯ್ಯ ಒತ್ತಾಯಿಸಿದರು. ನ್ಯಾಯಾಲಯದಲ್ಲಿ ತಡೆಯಾೆ ಇದ್ದರೂ ಏಕಾಏಕಿ ಸ್ಥಳಾಂತರ ಮಾಡುತ್ತಿದ್ದಾರೆ. ನೌಕರರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಸುಮಾರು 16 ಮಂದಿ ನೌಕರರ ಕುಟುಂಬ ಬೀದಿಗೆ ಬಂದಿದೆ ಎಂದು ಅಳಲು ತೋಡಿಕೊಂಡರು.

ಬೇಡಿಕೆ ಇಟ್ಟಿದ್ದಕ್ಕೆ ವಜಾ: ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿದ್ದ ಕಂಪನಿಯ ಒಂದು ವಿಭಾಗವನ್ನು ಕರೊನಾ ಕಾರಣಕ್ಕೆ ಟಿ.ಬೇಗೂರು ಗ್ರಾಮಕ್ಕೆ ಸ್ಥಳಾಂತರ ಮಾಡಿದ್ದರು. ಬಳಿಕ 4 ವರ್ಷ ಕಂಪನಿ ಉತ್ತಮವಾಗಿ ಕಾರ್ಯ ನಡೆಸಿದ್ದು, 20 ಕಾಯಂ ನೌಕರರು ಹಾಗೂ 150ಕ್ಕೂ ಹೆಚ್ಚು ಗುತ್ತಿಗೆ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದರು. ಬಳಿಕ ನೌಕರರ ಸಂ ಸ್ಥಾಪನೆ ಮಾಡಿಕೊಂಡು ಕೆಲ ಬೇಡಿಕೆ ಈಡೇರಿಸುವಂತೆ ಪ್ರಶ್ನಿಸಿದ್ದ ಕಾಯಂ ನೌಕರರನ್ನು 2024ರ ಆಗಸ್ಟ್​ನಲ್ಲಿ ಏಕಾಏಕಿ ವಜಾಗೊಳಿಸಿದರು ಎಂದು ಪ್ರತಿಭಟನಕಾರ ಪರಮೇಶ್ವರಯ್ಯ ದೂರಿದರು. ವರ್ಷದಿಂದ ಕಂಪನಿ ಹಾಗೂ ನೌಕರರ ನಡುವೆ ಸಾಕಷ್ಟು ರಾಜೀಪಂಚಾಯಿತಿ ಮಾಡಿದ್ದರೂ ಪ್ರಯೋಜವಾಗಿರಲಿಲ್ಲ. ಬಳಿಕ ಇತ್ತೀಚೆಗೆ ನೌಕರರ ನ್ಯಾಯಾಲಯದ ಮೊರೆ ಹೋಗಿ ಕಂಪನಿಯಲ್ಲಿದ್ದ ವಸ್ತುಗಳನ್ನು ಸ್ಥಳಾಂತರ ಮಾಡದಂತೆ ತಡೆಯಾೆ ತಂದಿದ್ದರು. 2025ರ ಸೆ.22ರಂದು ಏಕಾಏಕಿ ಕಾನೂನು ಉಲ್ಲಂನೆ ಮಾಡಿ ಕಂಪನಿಯ ಕೆಲ ಯಂತ್ರೋಪಕರಣಗಳನ್ನು ಸ್ಥಳಾಂತರಿಸಲು ಮುಂದಾದರು. ಈಗಲೂ ಪೊಲೀಸ್​ ಸಹಕಾರ ಪಡೆದುಕೊಂಡ ಕಂಪನಿ ಪ್ರತಿಭಟನೆ ಮಾಡುತ್ತಿದ್ದ ಕಾರ್ಮಿಕರನ್ನು ತೆರವುಗೊಳಿಸಲು ಮುಂದಾಗಿದೆೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net