ನೌಕರನಿಂದ ಚಿನ್ನಾಭರಣ ಮಳಿಗೆಯಲ್ಲಿ ಚಿನ್ನಾಭರಣ ಕಳವು

golds
Published on

ಮೈಸೂರು: ಚಿನ್ನಾಭರಣ ಮಾರಾಟ ಮಳಿಗೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನೌಕರ 18 ಲಕ್ಷ ರೂ. ವೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾನೆ.

ನಗರದ ಕಬೀರ್ ರಸ್ತೆ ನಿವಾಸಿ ರಿತೇಶ್ ಎಂಬಾತನೇ ಚಿನ್ನಾಭರಣ ದೋಚಿಕೊಂಡು ಪರಾರಿಯಾದ ಆರೋಪಿ. ದೇವರಾಜ ಅರಸು ರಸ್ತೆಯಲ್ಲಿ ಚಿನ್ನಾಭರಣ ಮಳಿಗೆಯಲ್ಲಿ ರಿತೇಶ್ ಸೇಲ್ಸ್‌ಮನ್‌ಆಗಿ ಕೆಲಸ ನಿರ್ವಹಿಸುತ್ತಿದ್ದ. ಮಾಲೀಕರಾದ ಪ್ರಸನ್ನ ಕುಮಾರ್ ತನ್ನ ತಮ್ಮನ ಮದುವೆಗಾಗಿ 25 ದಿನಗಳಕಾಲ ಬೆಂಗಳೂರಿಗೆ ತೆರಳಿದ್ದರು.

ವಾಪಸ್ ಬಂದು ಆಭರಣಗಳ ಸ್ಟಾಕ್ ಪರಿಶೀಲನೆ ನಡೆಸಿದ ಸಂದರ್ಭ 100 ಗ್ರಾಂ ಚಿನ್ನದ ಗಟ್ಟಿ ಹಾಗೂ 160 ಗ್ರಾಂ ಚಿನ್ನದ ಸರಗಳು ಕಾಣೆಯಾಗಿದ್ದವು. ಈ ಸಂಬಂಧ ಕೆಲಸಗಾರರನ್ನು ವಿಚಾರಣೆ ನಡೆಸಿದ್ದರು. ಈ ನಡುವೆ ರಿತೇಶ್ ಯಾರಿಗೂ ಹೇಳದೆ ಕೆಲಸ ಬಿಟ್ಟಿದ್ದ. ಆತ ಚಿನ್ನವನ್ನು ದೋಚಿ ಪರಾರಿಯಾಗಿದ್ದಾನೆ ಎಂದು ಮಾಲೀಕರು ದೂರು ನೀಡಿದ್ದಾರೆ. ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net