ಜಿಲ್ಲಾಡಳಿತ ಭವನದ ಆವರಣದಲ್ಲಿ ನೌಕರ ಆತ್ಮಹತ್ಯೆ, ‌ನ್ಯಾಯಕ್ಕಾಗಿ ಕುಟುಂಬಸ್ಥರ ಆಗ್ರಹ

IMG_20250808_125308.jpg
Published on

ಚಿಕ್ಕಬಳ್ಳಾಪುರ: ಸರ್ಕಾರಿ ಕೆಲಸಕ್ಕಾಗಿ ಹೆಚ್ಚಿದ ಸಾಲ, ಹಣ ಪಡೆದುಕೊಂಡವರು ವಾಪಸ್ ನೀಡದಿರುವುದು, ಆನ್ ಲೈನ್ ಗೇಮ್ ನಲ್ಲಿ ಗೆದ್ದು ಸಾಲವನ್ನು ತೀರಿಸುವ ಪ್ಲಾನ್ ನಿಂದ ಅಪಾರ ಪ್ರಮಾಣದಲ್ಲಿ ಹಣ ನಷ್ಟ. ಇವೆಲ್ಲವೂ ಜಿ.ಪಂ.ಲೆಕ್ಕಾಧಿಕಾರಿಯ ಹೊರ ಗುತ್ತಿಗೆಯಾಧಾರಿತ ನೌಕರ ಬಾಬು ಸಾವಿಗೆ ಕಾರಣವಾಗಿದ್ದು ಇದೀಗ ಕುಟುಂಬಸ್ಥರು ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ.
ಈಗಾಗಲೇ ಡೆತ್ ನೋಟ್ ಆಧಾರಿಸಿ ಮೃತನ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಎಫ್ ಐ ಆರ್ ನಲ್ಲಿ  ಸಂಸದ ಡಾ ಕೆ.ಸುಧಾಕರ್ ಮೊದಲ ಆರೋಪಿ. ಬಳಿಕ ಹಣ ಪಡೆದು ವಂಚಿಸಿದ ಸುಧಾಕರ್ ಬೆಂಬಲಿಗ ಎನ್ ಎನ್ ಆರ್ ನಾಗೇಶ್, ಜಿ.ಪಂ.ಲೆಕ್ಕಾಧಿಕಾರಿ ಕಚೇರಿಯ ಸಹಾಯಕ ಮಂಜುನಾಥ್ ಆರೋಪಿಗಳಾಗಿದ್ದಾರೆ.

*ಸಾಲಕ್ಕೆ ಮತ್ತೆ ಸಾಲ*
ಲಂಚದ ಹಣವನ್ನು ಹೊಂದಿಸಲು ಸಾಲದ ಮೇಲೆ ಸಾಲ ಮಾಡಿದ್ದರ ಬಗ್ಗೆ ಡೆತ್‌ ನೋಟ್‌ ನಲ್ಲಿ ಅಳಲನ್ನು ತೋಡಿಕೊಳ್ಳಲಾಗಿದೆ. 
ಕೆಲಸಕ್ಕಾಗಿ ಕೊಟ್ಟು ಹಣವನ್ನು ಕಳೆದುಕೊಂಡಿದ್ದು ಬೇರೆಯವರ ಬಳಿ ಹೊಸದಾಗಿ ೧೬ ಲಕ್ಷ ರೂ ಸಾಲವನ್ನು ಮಾಡಿ ಬಾಪೂಜಿ ನಗರದ ಮುನಿರಾಜು ಹಾಗೂ ವಿ.ಕೃಷ್ಣಗೆ ಹಳೇ ಸಾಲವಾಗಿ ೩ ಲಕ್ಷ ರೂ ಕೊಡಲಾಗಿದೆ. ಹಾಗೆಯೇ ಆರ್ಥಿಕ ಹೊರೆಯ ತಲೆ ಭಾರವನ್ನು ತಪ್ಪಿಸಲು ಆನ್‌ ಲೈನ್‌ ಗೇಮ್‌ ಆಡಿ ೧೧ ಲಕ್ಷ ರೂ ಕಳೆದುಕೊಂಡಿದ್ದಾನೆ. ಬೈಕು, ತಾಯಿ, ಹೆಂಡತಿ ಒಡವೆಗಳು ಅಡ ಇಟ್ಟಿದ್ದು ಈ ಎಲ್ಲದರಿಂದ ಬೇಸರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತ ಬಾಬು ಆರೋಪಿಸಿದ್ದಾನೆ.

*ನ್ಯಾಯ ಕೊಡಿಸಲು ಆಗ್ರಹ*
ಸರ್ಕಾರಿ ಕೆಲಸ ಕೊಡಿಸುವುದಾಗಿ ಹಣ ಪಡೆದುಕೊಂಡ ವಂಚಿಸಿದ, ನಿರಂತರವಾಗಿ ಕಿರುಕುಳ ನೀಡಿ ಬೆದರಿಕೆಯೊಡ್ಡಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಬೇನಾಮಿ ಆಸ್ತಿಗಳನ್ನು ಸಂಪಾದಿಸಿದ, ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವ ಮಂಜುನಾಥ್‌ ಅಕ್ರಮಗಳ ಬಗ್ಗೆ ತನಿಖೆ ಕೈಗೊಳ್ಳಬೇಕು ಎಂದು ಮೃತ ಬಾಬು ಒತ್ತಾಯಿಸಿದ್ದಾರೆ. ಶಾಸಕ ಪ್ರದೀಪ್‌ ಈಶ್ವರ್‌, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಜಿ.ಪಂ.ಸಿಇಒ, ಎಡಿಸಿಗೆ ನ್ಯಾಯ ಕೊಡಿಸಲು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net