ಮೆಡಿಕಲ್ ಬಿಲ್ ಪಾವತಿಗೆ ಸಕಾರಾತ್ಮಕ ಸ್ಪಂದನೆ

03 HNL
Published on

ಹೊನ್ನಾಳಿ: ಶಿಕ್ಷಕರ ಆರೋಗ್ಯಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ 1.25 ಕೋಟಿ ಮೆಡಿಕಲ್ ಬಿಲ್ ಬಾಕಿ ಇದೆ. ರಾಜ್ಯ ಸಂಘದ ಅಧ್ಯಕ್ಷ, ಪದಾಧಿಕಾರಿಗಳು ಮತ್ತು ಶಾಸಕರನ್ನು ಭೇಟಿ ಮಾಡಿ ಬಾಕಿ ಪಾವತಿಗೆ ಮನವಿ ಮಾಡಿದ್ದು, ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ. ಅರುಣ್ ಹೇಳಿದರು.

ತಾಲೂಕಿನ ಗುರುಭವನದಲ್ಲಿ ಶನಿವಾರ ಶಿಕ್ಷಕರ ಸಂಘದ ನೂತನ ಅಧ್ಯಕ್ಷ ಚಂದ್ರಶೇಖರ್ ಅವರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಇದುವರೆಗೂ ಕಚೇರಿ ಇಲ್ಲ. ಮುಂದಿನ ದಿನಗಳಲ್ಲಿ ಪ್ರಯತ್ನ ಮಾಡಿ ರಾಜ್ಯ ಸಂಘದಿಂದ ಅನುದಾನ ಕೊಡಿಸಿ ಕಚೇರಿ ಸ್ಥಾಪನೆ ಮಾಡಿಸುವುದಾಗಿ ಭರವಸೆ ನೀಡಿದರು.

ನೂತನ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಗುರುಭವನದ ಮುಂಭಾಗದಲ್ಲಿ ಮೂರು ಮಳಿಗೆಗಳನ್ನು ಕಟ್ಟಲು ಜಾಗವಿದ್ದು, ಅದನ್ನು ನಿರ್ವಿುಸಲು ಶ್ರಮ ಹಾಕುವೆ. ಈ ಹಿಂದೆ ಗುರುಭವನ ನಿರ್ವಹಣೆ ಮಾಡಲು ಕಷ್ಟವಾದಾಗ ವೈಯಕ್ತಿಕವಾಗಿ ಲಕ್ಷಾಂತರ ರೂ. ಹಾಕಿ ಶಿಕ್ಷಕರ ಸಂಘದಿಂದ ಮತ್ತು ಶಿಕ್ಷಕರ ಸಹಕಾರದಿಂದ ಮಳಿಗೆ ನಿರ್ವಿುಸಲಾಗಿತ್ತು. ಇಂದು ಅದರಿಂದ ಬರುವ ಬಾಡಿಗೆಯಿಂದ ಸ್ವಲ್ಪಮಟ್ಟಿಗೆ ನಿರ್ವಹಣೆಯಾಗುತ್ತಿದೆ. ಮೂರು ಮಳಿಗೆಗಳನ್ನು ನಿರ್ವಿುಸಲು ತಾಲೂಕು ಸರ್ಕಾರಿ ನೌಕರರ ಸಂಘ ಹಾಗೂ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ನೂತನ ಸಹಕಾರ್ಯದರ್ಶಿ ಜಿ. ಗೀತಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಾಗೇಂದ್ರಪ್ಪ, ಮಾಜಿ ಅಧ್ಯಕ್ಷ ಬಿ.ಎಸ್. ರುದ್ರೇಶ್ ಹಾಗೂ ಶಿಕ್ಷಕ ರಾಮಪ್ಪ ಮಾತನಾಡಿದರು.

ಸಂಘದ ಪದಾಧಿಕಾರಿಗಳಾದ ಎಚ್.ಜಿ. ಪುರುಷೋತ್ತಮ್ ಗೊಲ್ಲರಹಳ್ಳಿ ತಿಮ್ಮಪ್ಪ, ಹೊನ್ನೇಶ್, ಕರಿಬಸವಯ್ಯ, ಸುರೇಶ್ ಗೆಜ್ಜುರಿ, ಗಂಡುಗಲಿ ಮಂಜಪ್ಪ, ರಾಜ್​ಕುಮಾರ್, ನೀಲಮ್ಮ ಆಂಜನೇಯ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net