ವೈಚಾರಿಕ ಆಚರಣೆಗೆ ಮಹತ್ವ ನೀಡಿ

Emphasize rational practice.
ರಬಕವಿ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಗಿರೀಶ ಮುತ್ತೂರ, ಚಿದಾನಂದ ಗಾಳಿ, ಈಶ್ವರ ಬೀಳಗಿ, ಬಿ.ಎಂ. ಮಟ್ಟಿಕಲ್ಲಿ, ಚಿದಾನಂದ ಸೋಲಾಪುರ, ಎಂ.ಎಸ್. ಬಾದಾಮಿ, ಬಿ.ವಿ. ಅಮಲಜೇರಿ ಮತ್ತಿತರರಿದ್ದಾರೆ.
Published on

ರಬಕವಿ/ ಬನಹಟ್ಟಿ : ವಿದ್ಯಾರ್ಥಿಗಳು ಮೂಢನಂಬಿಕೆ ತೊಡೆದು ವಿಜ್ಞಾನದ ಕಲಿಕೆಗೆ ಹೆಚ್ಚಿನ ಮಹತ್ವ ನೀಡಬೇಕು. ಶಾಲೆಯಲ್ಲಿ ವಿಜ್ಞಾನ ಕುರಿತು ಪಾಠ ಬೋಧನೆ ಮಾಡಿ ಮನೆಯಲ್ಲಿ ಮೂಢನಂಬಿಕೆ ಆಚರಿಸುವ ವ್ಯಕ್ತಿಗೆ ಯಾವುದೇ ಮೌಲ್ಯ ಇಲ್ಲ ಎಂದು ರಬಕವಿಯ ಬಸವ ಎಜುಕೇಶನ್ ಸೊಸೈಟಿ ನಿರ್ದೇಶಕ ಗಿರೀಶ ಮುತ್ತೂರ ತಿಳಿಸಿದರು.

ರಬಕವಿ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನದೊಂದಿಗೆ ಸಂಪ್ರದಾಯ ಮತ್ತು ಸಂಸ್ಕಾರವನ್ನು ಪರಿಶೀಲಿಸಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ವಿಜ್ಞಾನ ದಿನಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನವನ್ನು ಶಿಕ್ಷಣ ಸಂಸ್ಥೆಯ ಚೇರ್ಮನ್ ಬಸವರಾಜ ಯಂಡಿಗೇರಿ ಉದ್ಘಾಟಿಸಿದರು.

ಆಡಳಿತ ಮಂಡಳಿ ಸದಸ್ಯರಾದ ಚಿದಾನಂದ ಗಾಳಿ, ಈಶ್ವರ ಬೀಳಗಿ, ಹೊಸಮನಿ ವಕೀಲರು, ಬಿ.ಎಂ. ಮಟ್ಟಿಕಲ್ಲಿ, ಚಿದಾನಂದ ಸೋಲಾಪುರ, ಎಂ.ಎಸ್. ಬಾದಾಮಿ, ಬಿ.ವಿ. ಅಮಲಜೇರಿ, ಪಿ.ಸಿ. ಸೋಲಾಪುರ, ಎಸ್.ಎಸ್. ಹೊಸಮನಿ, ಎಲ್.ಎಸ್. ಸನ್ಮನಿ, ಎ.ಡಿ. ಎರಡರಹಟ್ಟಿ, ಎಸ್.ಎನ್. ಖವಾಸಿ, ಟಿ.ವಿ. ಹಾಗರಗಿ, ಎಸ್.ಬಿ. ಬೆಕ್ಕೇರಿ, ಬಿ.ಎಸ್. ಕಳ್ಳಿಗುದ್ದಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net