ಬಾಯಿ ಆರೋಗ್ಯ ರಕ್ಷಣೆಗೆ ಒತ್ತು ನೀಡಿ

ಸರಗೂರು ತಾಲೂಕಿನ ನೇಮ್ಮನಹಳ್ಳಿ ಗ್ರಾಮದಲ್ಲಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸೆ ಶಿಬಿರದಲ್ಲಿ ಡಾ. ರವಿಕುಮಾರ್ ದಂತ ತಪಾಸಣೆ ನಡೆಸಿದರು. ಸಮೀವುಲ್ಲಾ ಷರೀಫ್, ಚಂದ್ರಶೇಖರ್ ಇದ್ದರು
ಸರಗೂರು ತಾಲೂಕಿನ ನೇಮ್ಮನಹಳ್ಳಿ ಗ್ರಾಮದಲ್ಲಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸೆ ಶಿಬಿರದಲ್ಲಿ ಡಾ. ರವಿಕುಮಾರ್ ದಂತ ತಪಾಸಣೆ ನಡೆಸಿದರು. ಸಮೀವುಲ್ಲಾ ಷರೀಫ್, ಚಂದ್ರಶೇಖರ್ ಇದ್ದರು
Published on

ಸರಗೂರು: ದೇಹದ ಆರೋಗ್ಯ ಜತೆಗೆ ಬಾಯಿ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಸಲಹೆ ನೀಡಿದರು.

ತಾಲೂಕಿನ ಬಿ.ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇಮ್ಮನಹಳ್ಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದ ಆವರಣದಲ್ಲಿ ಬುಧವಾರ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮತ್ತು ಸಾರ್ವಜನಿಕ ಆಸ್ಪತ್ರೆ ಎಚ್.ಡಿ.ಕೋಟೆ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಿ.ಮಟಕೆರೆ ಸಹಯೋಗದೊಂದಿಗೆ ಆಯೋಜಿಸಿದ್ದ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ಹಾಗೂ ಬಾಯಿ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ವಿಶ್ವ ಬಾಯಿ ಆರೋಗ್ಯ ದಿನಾಚರಣೆ ಪ್ರಯುಕ್ತ 2024ರಲ್ಲಿ ಹ್ಯಾಪಿ ಮೌತ್ ಈಸ್ ಹ್ಯಾಪಿ ಬಾಡಿ ಎಂಬ ಘೋಷ ವಾಕ್ಯ ಬಿಡುಗಡೆ ಮಾಡಿತ್ತು. ಇದರ ಅರ್ಥ ಬಾಯಿ ಆರೋಗ್ಯದಿಂದ ಸಂತೋಷವಾಗಿದ್ದರೆ ದೇಹವೂ ಸಂತೋಷವಾಗಿರುತ್ತದೆ. ದೇಹ ಶುಚಿ ಜತೆಗೆ ದಂತ ಶುಚಿಯೂ ಮುಖ್ಯ. ದಿನಕ್ಕೆ ಎರಡು ಬಾರಿ ದಂತ ಸ್ವಚ್ಛಗೊಳಿಸಬೇಕು ಎಂದರು.

ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆ ದಂತ ವೈದ್ಯ ಸಮೀವುಲ್ಲಾ ಶರೀಫ್ ಮಾತನಾಡಿ, ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಬಾಯಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು. ಬಾಯಿ ನಮ್ಮ ದೈಹಿಕ ಆರೋಗ್ಯಕ್ಕೆ ಕನ್ನಡಿ ಇದ್ದಂತೆ. ಅನೇಕ ರೋಗ ಲಕ್ಷಣಗಳು ಮೊದಲಿಗೆ ಬಾಯಲ್ಲೇ ಕಾಣಿಸಿಕೊಳ್ಳುವುದು. ಬಾಯಿ ಪರೀಕ್ಷಿಸಿದ್ರೆ ಆ ವ್ಯಕ್ತಿ ಎಷ್ಟು ಆರೋಗ್ಯವಾಗಿದ್ದಾನೆ ಎಂದು ಗುರುತಿಸಬಹುದು. ನಮ್ಮ ಆಹಾರ ಎಷ್ಟೇ ಪೌಷ್ಟಿಕಾಂಶದಿಂದ ಕೂಡಿದ್ದರು, ನಮ್ಮ ಬಾಯಿ ಆರೋಗ್ಯವಾಗಿಲ್ಲದಿದ್ದರೆ ಕ್ರಿಮಿಕೀಟ ಉತ್ಪತ್ತಿಯಾಗಿ ದೇಹಕ್ಕೆ ಸೇರುತ್ತೆ. ಇದರಿಂದ ಅನೇಕ ಕಾಯಿಲೆಗಳು ಬರುವ ಸಂಭವವಿದೆ. ಬಿಡಿ, ಸಿಗರೇಟ್, ತಂಬಾಕು ಎಂಬ ದುಶ್ಚಟದಿಂದ ದೂರ ಇರಬೇಕು. ಇದರಿಂದ ಬಾಯಿ ಕ್ಯಾನ್ಸರ್ ಬರುವುದನ್ನು ತಡೆಯಬಹುದು ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಅವರು, ಹಲ್ಲಿನ ನೋವು ಮತ್ತು ದಂತ ಭಾಗ್ಯದ ಬಗ್ಗೆ ವಿವರವಾಗಿ ತಿಳಿಸಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಟಿ.ರವಿರಾಜ್, ವಿಎಂಎಚ್ ಮೇಲ್ವಿಚಾರಕ ವೆಂಕಟಸ್ವಾಮಿ, ಆರೋಗ್ಯ ಸುರಕ್ಷಾಧಿಕಾರಿ ಅನಿತಾ, ಆಶಾ ಕಾರ್ಯಕರ್ತೆ ಜ್ಯೋತಿ , ವಿಎಂಎಚ್ ಮಹೇಶ್ ಇನ್ನಿತರರು ಹಾಜರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net