ಸಮಾಜದ ಪ್ರಗತಿಗಾಗಿ ಶಿಕ್ಷಣಕ್ಕೆ ಒತ್ತು ನೀಡಿ

Emphasize education for the progress of society
ರಬಕವಿಯ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಶಿವದಾಸಿಮಯ್ಯನವರ ಜಯಂತೋತ್ಸವದಲ್ಲಿ ಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ವಿನೋದ ಸಿಂದಗಿ, ಮಹೇಶ ಅರಬಳ್ಳಿ, ಚಿದಾನಂದ ಆಸಂಗಿ, ದಾನಪ್ಪತುಂಗಳ, ನಾಗಪ್ಪ ಅರಬಳ್ಳಿ, ಸಿದ್ರಾಮ ಸೊಲ್ಲಾಪೂರ, ಮೀನಾಕ್ಷಿ ಸಣಕಾಲ, ಶೋಭಾ ಅರಬಳ್ಳಿ, ಈರಣ್ಣ ಶಿವಣಗಿ ಇದ್ದರು.
Published on

ರಬಕವಿ/ಬನಹಟ್ಟಿ: 12ನೇ ಶತಮಾನದ ಹಲವಾರು ಶರಣರ-ದಾರ್ಶನಿಕರಲ್ಲಿ ಶಿವದಾಸಿಮಯ್ಯ ಕೂಡ ಒಬ್ಬರು. ಸರಳ ಜೀವನದ ಮೂಲಕವೇ ಉತ್ತಮ ಜೀವನ ನಡೆಸಿದ ಅವರ ಆದರ್ಶಗಳನ್ನು ಸಮಾಜ ಬಾಂಧವರು ಅನುಸರಿಸಬೇಕು ಎಂದು ಚಂದ್ರಶೇಖರ ಚೆನ್ನಿ ಹೇಳಿದರು.

ರಬಕವಿಯ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ಶಿವದಾಸಿಮಯ್ಯನವರ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಮಾಡುವ ವೃತ್ತಿಯನ್ನು ಆಧರಿಸಿ ಜಾತಿ ವ್ಯವಸ್ಥೆ ರೂಪಗೊಂಡಿತ್ತು. ಶಿವಶಿಂಪಿ ಎಂಬ ಸಮಾಜವಿಲ್ಲದಿದ್ದರೆ ನಮಗೆ ಬಟ್ಟೆಯೇ ಇರುತ್ತಿರಲಿಲ್ಲ. ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಒತ್ತು ನೀಡುವ ಮೂಲಕ ಸಮಾಜದ ಪ್ರಗತಿಗೆ ಶ್ರಮಿಸಬೇಕು ಎಂದರು.

ಚೇರ್ಮನ್ ಪ್ರಕಾಶ ಸಣಕಾಲ ಪ್ರಾಸ್ತಾವಿಕವಾಗಿ ಮಾತನಾಡಿ, ಶಿವಶಿಂಪಿ ಸಮಾಜವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸಬಲರಾಗಿ ಒಳ್ಳೆಯ ಪ್ರಗತಿ ಸಾಧಿಸಲು ಸರ್ಕಾರ ಪ್ರೋತ್ಸಾಹಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿನೋದ ಸಿಂದಗಿ, ಮಹೇಶ ಅರಬಳ್ಳಿ, ಚಿದಾನಂದ ಆಸಂಗಿ, ದಾನಪ್ಪತುಂಗಳ, ನಾಗಪ್ಪ ಅರಬಳ್ಳಿ, ಸಿದ್ರಾಮ ಸೊಲ್ಲಾಪೂರ, ಮೀನಾಕ್ಷಿ ಸಣಕಾಲ, ಶೋಭಾ ಅರಬಳ್ಳಿ, ಈರಣ್ಣ ಶಿವಣಗಿ, ಶ್ರೀಶೈಲ ಭೂಯ್ಯರ, ಪ್ರವೀಣ ಪಾವಟೆ, ಶಿವಶಂಕರ ಸವದಿ, ಶಶಿಕಾಂತ ಸಿಂಪಿ, ಪ್ರವೀಣ ಸವದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net