ಓದುವ ವಯಸ್ಸಿನಲ್ಲಿ ಶಿಕ್ಷಣಕ್ಕೆ ಒತ್ತು ಕೊಡಿ

ಅಳವಂಡಿ ಸಮೀಪದ ಗುಡ್ಲಾನೂರು ಸಹಿಪ್ರಾ ಶಾಲೆಯಲ್ಲಿ ದಾಖಲಾತಿ ಆಂದೋಲನ ಹಾಗೂ ಪ್ರಾರಂಭೋತ್ಸವ ಕುರಿತ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎಸ್‌ಡಿಎಂಸಿ ಅಧ್ಯಕ್ಷ ರವಿಕುಮಾರ, ಮುಖ್ಯಶಿಕ್ಷಕ ಚಳ್ಳಪ್ಪ, ಶಿಕ್ಷಕರಾದ ಶಿವಪುತ್ರಪ್ಪ, ದೇವಪ್ಪ, ಗೀತಾ, ಸೀಮಾ ಇತರರಿದ್ದರು.

Published on

ಅಳವಂಡಿ: ಶಿಕ್ಷಣವೇ ಮಕ್ಕಳಿಗೆ ದೊಡ್ಡ ಆಸ್ತಿ. ಶಿಕ್ಷಣದಿಂದ ಸಾಧನೆ ಮಾಡಲು ಸಾಧ್ಯ ಎಂದು ಎಸ್‌ಡಿಎಂಸಿ ಅಧ್ಯಕ್ಷ ರವಿಕುಮಾರ ಶಿವನಗೌಡರ ಹೇಳಿದರು.

ಸಮೀಪದ ಗುಡ್ಲಾನೂರು ಗ್ರಾಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಸಹಿಪ್ರಾ ಶಾಲೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ದಾಖಲಾತಿ ಆಂದೋಲನ ಹಾಗೂ ಪ್ರಾರಂಭೋತ್ಸವ ಕುರಿತು ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ನೀಡಲಾದ ವಿವಿಧ ಸೌಲಭ್ಯಗಳನ್ನು ಶಿಕ್ಷಕರು ಮಕ್ಕಳಿಗೆ ಸಕಾಲಕ್ಕೆ ತಲುಪಿಸಬೇಕು. ಗುಣಮಟ್ಟದ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡಬೇಕು ಎಂದರು.

ಮುಖ್ಯಶಿಕ್ಷಕ ಚಳ್ಳಪ್ಪ ಮಾತನಾಡಿ, ಸರ್ಕಾರ ಮಕ್ಕಳ ಶಿಕ್ಷಣಕ್ಕೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಹಾಲು, ರಾಗಿ ಮಾಲ್ಟ್ ಸೇರಿ ವಿವಿಧ ಸೌಕರ್ಯಗಳನ್ನು ಕಲ್ಪಿಸುತ್ತಿದೆ. ಆದ್ದರಿಂದ ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿ ವಿದ್ಯಾವಂತರನ್ನಾಗಿ ಮಾಡಿ ಎಂದು ತಿಳಿಸಿದರು.

ಶಿಕ್ಷಕರಾದ ಶಿವಪುತ್ರಪ್ಪ, ದೇವಪ್ಪ, ಗೀತಾ, ಸೀಮಾ, ಪ್ರಮುಖರಾದ ಬಸಯ್ಯ ಹಿರೇಮಠ, ಮುದಿಯಪ್ಪ ಬಡಿಗೇರ, ಬಸವರಾಜ ಮಲ್ಲನಗೌಡ್ರ, ದೇವಪ್ಪ ಹುರಕಡ್ಲಿ, ಸುರೇಶ, ಗುರು ಬಡಿಗೇರ, ಸಾವಿತ್ರಮ್ಮ, ಚಂದ್ರಮ್ಮ, ಮಂಜುಳಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net