ಆರೋಗ್ಯಕ್ಕಾಗಿ ಹಳ್ಳಿಗಳಲ್ಲಿ ಸ್ವಚ್ಛತೆಗೆ ಒತ್ತು ನೀಡಿ

FotoJet
Published on

ಕುಣಿಗಲ್​: ಗ್ರಾಮದ ನೈರ್ಮಲ್ಯ ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯ ಮೇಲಿರುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್​.ಮಂಜುನಾಥ್​ ಹೇಳಿದರು.

ತಾಲೂಕಿನ ಎಡೆಯೂರು ಹೋಬಳಿಯ ಮನವಳ್ಳಿಯ ಶ್ರೀ ತಿರುಮಲೆ ತಿಮ್ಮರಾಯಸ್ವಾಮಿ ದೇವಸ್ಥಾನದ ಜೀಣೋರ್ದ್ಧಾರ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ತಿರುಮಲೆ ತಿಮ್ಮರಾಯಸ್ವಾಮಿ ದೇವಾಲಯದ ನೂತನ ಕಟ್ಟಡದ, ವಿಮಾನಗೋಪುರ, ಕಳಸ, ಗರುಡಸ್ತಂಭ ಮತ್ತು ಪುರಾತನ ಸ್ಥಿರಬಿಂಬ ಪ್ರತಿಷ್ಠಾನ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಗ್ರಾಮ ನೈರ್ಮಲ್ಯ ಕಾಪಾಡುವುದು ಕೇವಲ ಗ್ರಾಪಂ, ಸರ್ಕಾರ ಕರ್ತವ್ಯ ಮಾತ್ರವಲ್ಲ. ಹಳ್ಳಿಗಳಲ್ಲಿ ಸ್ವಚ್ಛತೆಗೆ ಒತ್ತು ಕೊಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ನಮ್ಮ ಸಂಪ್ರದಾಯ, ಧಾರ್ಮಿಕ ಪದ್ಧತಿಗೆ ಗೌರವ ಇದೆ. ನಂಬಿಕೆ, ಮೂಢನಂಬಿಕೆ ಇರಬಹುದು. ಮಾರಮ್ಮನನ್ನು ಪೂಜಿಸುವುದು ಹಳ್ಳಿಗರ ನಂಬಿಕೆ ಆಗಿದೆ. ನಂಬಿಕೆಗೆ ವೈಜ್ಞಾನಿಕ ತಳಹದಿಯು ಇದೆ. ಆಷಾಡ ಸಂದರ್ಭದಲ್ಲಿ ಬಿತ್ತನೆ ಆಗಿರುತ್ತದೆ ಅಂತಹ ವೇಳೆ ಹೆಣ್ಣಿನ ತವರು ಮನೆಯಲ್ಲಿ ಗಂಡ ಹೋಗಿ ಕುಳಿತುಕೊಳ್ಳಬಾರದು ಎಂಬ ಕಾರಣಕ್ಕೆ ಅತ್ತೆ ಮನೆಗೆ ಅಳಿಯ ಹೋಗದಂತೆ ಸಂಪ್ರದಾಯ ಅನುಸರಿಸಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.

ಅಂಡರ್​ಪಾಸ್​ ನಿರ್ಮಾಣ

ಸೋಲೂರು ಮತ್ತು ಎಡೆಯೂರು ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ 7 ಕಡೆ ಕಲ್ವರ್ಟರ್​ ಮತ್ತು ಅಂಡರ್​ ಪಾಸ್​ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಪ್ರಧಾನಮಂತ್ರಿ ಕಿಸಾನ್​ ಸನ್ಮಾನ್​ ಯೋಜನೆ ಅಡಿ ಪ್ರತಿಯೊಬ್ಬ ರೈತರ ಖಾತೆಗೆ 6 ಸಾವಿರ ರೂ., ಜಮೆ ಮಾಡಲು ಕ್ರಮವಹಿಸಲಾಗಿದೆ. ಈ ರೀತಿ ಕೇಂದ್ರ ಸರ್ಕಾರವು ಹಲವು ಯೋಜನೆಗಳು ಅರ್ಹ ಲಾನುಭವಿಗಳಿಗೆ ತಲುಪಿಸಬೇಕೆಂಬುದು ನನ್ನ ಆಶಯವಾಗಿದೆ ಎಂದು ಮಂಜುನಾಥ್​ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net