

ನಾಗರಮುನ್ನೋಳಿ: ಯುವಕರು ಕಲಿಕೆಯೊಂದಿಗೆ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ದೇಶಿ ಕ್ರೀಡೆ ಉಳಿಸಬೇಕು ಎಂದು ಉದ್ಯಮಿ ಮಹೇಶ ಬೆಲ್ಲದ ಹೇಳಿದರು.
ಗ್ರಾಮದ ಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ದೇಶಿ ಕ್ರೀಡೆಗಳಿಗೆ ಒತ್ತು ನೀಡುವ ಜತೆ ಗ್ರಾಮೀಣ ಭಾಗದಲ್ಲಿ ಕುಸ್ತಿ ಪಟುಗಳನ್ನು ಬೆಳೆಸಬೇಕು ಎಂದರು.
ಕೆಎಂಎಫ್ ನಿರ್ದೇಶಕ ವಿ.ಬಿ.ಈಟಿ ಮತ್ತು ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದಪ್ಪ ಮರ‍್ಯಾಯಿ ಮಾತನಾಡಿದರು.
ಪಂದ್ಯಾವಳಿಯಲ್ಲಿ ಮಹಾನ್ ಭಾರತ ಕೇಸರಿ ಪೈಲ್ವಾನ್ ಮೌಲಿ ಜಂಬದಾಡೆ ಪ್ರಥಮ, ಕರ್ನಾಟಕದ ಕೇಸರಿ ಪೈಲ್ವಾನ್ ಸಂಗಮೇಶ ಬಿರಾದಾರ ದ್ವಿತೀಯ ಮತ್ತು ಉತ್ತರ ಪ್ರದೇಶದ ಕೇಸರಿ ಪೈಲ್ವಾನ್ ಸುದೇಶ ಠಾಕೂರ ತೃತೀಯ ಸ್ಥಾನ ಪಡೆದರು.
ಸುರೇಶ ಬೆಲ್ಲದ, ವೈದ್ಯ ಡಾ.ಎಂ.ಬಿ.ಕುಂಬಾರ, ಶಿವಾನಂದ ರ‍್ಯಾಯಿ, ಶಿವರಾಜ ಜಾಧವ, ರಾಜು ಕುಂಬಾರ, ಲಕ್ಷ್ಮಿಸಾಗರ ಈಟಿ, ಬಸವರಾಜ ಮನಗೂಳಿ, ಗುಲಾಬ ಜಮಾದಾರ, ವಿನಾಯಕ ಕುಂಬಾರ, ಬಾಬು ಕಾಳನ್ನವರ, ಚೂನಪ್ಪ ಪೂಜೇರಿ, ಲಕ್ಷ್ಮಣ ಪೂಜೇರಿ, ಶಿವಪುತ್ರ ಮನಗೂಳಿ, ಬಸವಣ್ಣಿ ಕುಂಬಾರ, ನಿಜಾಂ ಪೆಂಡಾರಿ, ಬಸವರಾಜು ಕುಂಬಾರ, ಸಿದ್ದು ಈಟಿ, ಎಂ.ಬಿ.ಆಲೂರೆ, ಮಹಾದೇವ ಚೌಗಲಾ, ಬಸವಣ್ಣಿ ಕುಂಬಾರ, ರಾಜು ಚೌಹ್ವಾಣ, ಅನಿಲ ಈಟಿ, ಜೋತಪ್ಪ ಖಗನ್ನವರ, ಲಾಡಜಿ ಮುಲ್ತಾನಿ, ಬಿ.ಎಸ್.ಯಾದಗೂಡೆ, ರಮೇಶ ಕಾಳನ್ನವರ, ಮಹಾಲಿಂಗ ಬಸ್ತವಾಡೆ, ರಮೇಶ ಕುಂಬಾರ, ಬಸವರಾಜ ಘೋಡಗೇರಿ ಇತರರಿದ್ದರು.