ಸಾವಯವ ಕೃಷಿಗೆ ಒತ್ತು ನೀಡಲಿ

14Ainapur1
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:12; brp_del_th:0.1775,0.0000; brp_del_sen:0.1000,0.0000; motionR: 0; delta:null; bokeh:0; module: photo;hw-remosaic: false;touch: (-1.0, -1.0);sceneMode: 2621440;cct_value: 0;AI_Scene: (0, 0);aec_lux: 198.01193;aec_lux_index: 0;albedo: ;confidence: ;motionLevel: 0;weatherinfo: null;temperature: 32;
Published on

ಐನಾಪುರ: ಭಾರತ ಕೃಷಿ ಆಧಾರಿತ ದೇಶವಾಗಿದೆ. ಸದ್ಯ ಕೃಷಿಯಿಂದ ಎಲ್ಲರೂ ದೂರವಾಗುತ್ತಿದ್ದು, ಬರುವ ದಿನಗಳಲ್ಲಿ ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುವ ಕಾಲ ದೂರವಿಲ್ಲ ಎಂದು ಶಾಸಕ ರಾಜು ಕಾಗೆ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಸಿದ್ಧೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ 32ನೇ ಬೃಹತ್ ಕೃಷಿ ಮೇಳ ಉದ್ಘಾಟಿಸಿ ಮಾತನಾಡಿ, ಕೈಗಾರಿಕೆ, ವಾಣಿಜ್ಯ ಉದ್ಯಮಿಗಳಿಂದ ಭೂಮಿ ಒತ್ತಡಕ್ಕೆ ಒಳಗಾಗಿರುವುದರಿಂದ ಕೃಷಿಗೆ ಬಲವಾದ ಪೆಟ್ಟು ಬೀಳುತ್ತಿದೆ. ರೈತರು ಧನ-ಕರುಗಳನ್ನು ಸಲಹುತ್ತಿಲ್ಲ. ಇದರಿಂದ ಸಾವಯುವ ಗೊಬ್ಬರ ಕೊರತೆಯಾಗಿ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತಿವೆ. ಸಾವಯುವ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ಅಂದಾಗ ಮಾತ್ರ ಕೃಷಿ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಸಾನ್ನಿಧ್ಯ ವಹಿಸಿದ್ದ ಕವಲಗುಡ್ಡದ ಅಮರೇಶ್ವರ ಮಹಾರಾಜರು ಮಾತನಾಡಿ, ಅಂತರಂಗದ ಕೃಷಿ ಮಾಡಿದರೆ ಮಾತ್ರ ಬಹಿರಂಗದ ಕೃಷಿ ಕೈಗೊಳ್ಳಲು ಸಾಧ್ಯ. ಎಲ್ಲರೂ ಕೃಷಿ ಮೇಳದ ಸದುಪಯೋಗ ಪಡೆದುಕೊಳ್ಳಬೇಕು. ಕೃಷಿಗೆ ಪೆಟ್ಟುಬಿಳುತ್ತಾ ಹೋದಲ್ಲಿ ರೈತನ ಕಾಲಿಗೆ ಬಿದ್ದು ಅನ್ನ ನೀಡು ಎಂದು ಬೇಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಭವಿಷ್ಯ ನುಡಿದರು.

ಜಾತ್ರಾ ಕಮಿಟಿ ಅಧ್ಯಕ್ಷ ಸುಭಾಷ ಪಾಟೀಲ, ಪಪಂ ಸದಸ್ಯ ಅರುಣ ಗಾಣಿಗೇರ, ಪ್ರಕಾಶ ರ್ಖೋಬು, ಸುರೇಶ ಗಾಣಿಗೇರ, ಸುಭಾಷ ಪಾಟೀಲ, ಚಮನ್ನರಾವ ಪಾಟೀಲ, ಸುನೀಲ ಪಾಟೀಲ, ತಾತ್ಯಾಸಾಹೇಬ ಕುಚನೂರೆ, ಜಗದೀಶ ಪಟರ್ವಧನ, ಅರವಿಂದ ಕಾರ್ಚಿ, ಸಹದೇವ ನಾಯಿಕ, ವಿಶ್ವನಾಥ ನಾಮದಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net